ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯ ವತಿಯಿಂದ ಪುನಃಪ್ರವೇಶೋತ್ಸವದೊಂದಿಗೆ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸುವ ಕಾರ್ಯಕ್ರಮ ಜರುಗಿತು.
ಸಂಪೂರ್ಣ ಕೋವಿಡ್ ಮಾನದಂಡಗಳ ಪಾಲನೆಯೊಂದಿಗೆ ಕಾರ್ಯಕ್ರಮ ಹಾಗೂ ಮುಂದಿನ ದಿನಗಳಲ್ಲಿ ತರಗತಿ ನಡೆಸಲು ಆಡಳಿತ ಸಮಿತಿ ತೀರ್ಮಾನಿಸಿದೆ. ಒಂದು ತರಗತಿಯಲ್ಲಿ 20 ವಿದ್ಯಾರ್ಥಿಗಳಷ್ಟೇ ಕುಳಿತುಕೊಳ್ಳಬಹುದಾಗಿದ್ದು ಉಳಿದ ವಿದ್ಯಾರ್ಥಿಗಳಿಗೆ ಇನ್ನೊ0ದು ದಿನದ ಬದಲಿ ವ್ಯವಸ್ಥೆಯನ್ನು ಮಾಡಲಾಗಿದೆ.
ಪಠ್ಯಪುಸ್ತಕ , ನೋಟ್ ಪುಸ್ತಕಗಳ ಭಾರಹೊರುವ ಪ್ರಮೇಯವಿಲ್ಲದೆ ಅಗತ್ಯದ ಸೀಮಿತ ವಸ್ತುಗಳನ್ನು ಮಾತ್ರ ತರಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ದಿನಕ್ಕೆ ಮಧ್ಯಾಹ್ನದ ವರೆಗಿನ ಎರಡು ತರಗತಿಗಳು ಮಾತ್ರವೇ ಇದ್ದು ಸಂಪೂರ್ಣ ಚಟುವಟಿಕಾ ಆಧಾರವಾಗಿ ಹಾಗೂ ಗುಂಪು ರಹಿತವಾಗಿದ್ದು ವಿದ್ಯಾರ್ಥಿಗಳು ಆಸ್ವಾದಿಸಿದರು. ಈ ಸಂದರ್ಭ ಕೇರಳ ರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ದ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಾದ ಕೃಷ್ಣಾನಂದ ಜಿ. ನಾಯರ್ ಹಾಗೂ ಅನ್ವಿತ ಅವರು ಮಾತನಾಡಿದರು. ಮಲಯಾಳ ಹಾಗೂ ಕನ್ನಡ ದಲ್ಲಿ ನಾಡುನುಡಿಗಳ ಬಗೆಗಿನ ಹಾಡನ್ನು ವಿದ್ಯಾರ್ಥಿಗಳು ಹಾಡಿದರು.
ಉಪಪ್ರಾಂಶುಪಾಲೆ ಶ್ರೀಮತಿ ಪದ್ಮಾವತಿ, ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಪೂರ್ಣಿಮ ಹಾಗೂ ಶ್ರೀಮತಿ ಸಿಂಧುಶಶೀಂದ್ರನ್ ಮೇಲ್ವಿಚಾರಣೆ ನಡೆಸಿದರು.