ಕಿಚಡಿ ಆರೊಗ್ಯಕರವಾದ ಆಹಾರವಾಗಿದೆ. ಇದನ್ನು ಬೆಳಗ್ಗೆ, ಸಂಜೆ ಯಾವ ಹೊತ್ತಿನಲ್ಲಿ ಬೇಕಾದರೂ ಸವಿಯಬಹುದು. ಭಾರತದ ಪ್ರಸಿದ್ಧ ಆಹಾರಗಳಲ್ಲಿ ಕಿಚಡಿಯೂ ಒಂದು. ಇದನ್ನು ಮಕ್ಕಳಿಗೆ ಸ್ವಲ್ಪ ಖಾರ ಕಡಿಮೆ ಮಾಡಿ ತಯಾರಿಸಿ ಕೊಟ್ಟರೆ ಅವರಿಗೆ ಪೌಷ್ಠಿಕಾಂಶದ ಆಹಾರ ನೀಡಿದಂತಾಗುವುದು. ಇದನ್ನು ತಿನ್ನಲು ರುಚಿಕರವಾಗಿರುವುದರಿಂದ ಮಕ್ಕಳಿಗೆ ತುಂಬಾನೇ ಇಷ್ಟವಾಗುವುದು.
ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಗ್ರಿ ಚಿಕ್ಕ ಲೋಟದಲ್ಲಿ 1/2 ಲೋಟ ಹೆಸರು ಬೇಳೆ ಅದೇ ಲೋಟದಲ್ಲಿ 1/2 ಲೋಟ ಅಕ್ಕಿ 2 ಕಾಳು ಮೆಣಸು 1 ಈರುಳ್ಳಿ 1-2 ಟೊಮೆಟೊ 1-2 ಒಣ ಮೆಣಸು (ನಿಮ್ಮ ಮಗುವಿಗೆ ಖಾರ ಇಷ್ಟವಿಲ್ಲದಿದ್ದರೆ 1 ಮೆಣಸು ಹಾಕಿ) 1/2 ಚಮಚ ಬಾದಾಮಿ/ಪಿಸ್ತಾ ಪುಡಿ (optional) 1/4 ಚಮಚ ಜೀರಿಗೆ ಪುಡಿ 1/4 ಚಮಚ ಕೊತ್ತಂಬರಿ ಪುಡಿ ಚಿಟಿಕೆಯಷ್ಟು ಅರಿಶಿಣ ಪುಡಿ 1 ಲವಂಗ 1 ಚಮಚ ತುಪ್ಪ ಕರಿಬೇವು/ ಪಲಾವ್ ಎಲೆ
ಮಾಡುವ ವಿಧಾನ: * ಕುಕ್ಕರ್‌ನಲ್ಲಿ ಹೆಸರು ಬೇಳೆ, ಅಕ್ಕಿ, ಟೊಮೆಟೊ, ಈರುಳ್ಳಿ, ಕಾಳು ಮೆಣಸು, ರುಚಿಗೆ ತಕ್ಕ ಉಪ್ಪು, ಅರಿಶಿಣ ಹಾಕಿ 4 ಲೋಟ ನೀರು ಹಾಕಿ ಬೇಯಿಸಿ. 4-5 ವಿಶಲ್ ಆಗುವಷ್ಟು ಹೊತ್ತು ಬೇಯಿಸಿ. * ಈಗ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಸ್ವಲ್ಪ ಜೀರಿಗೆ ಹಾಕಿ ಅದು ಚಟ್‌ಪಟ್ ಶಬ್ದ ಮಾಡುವಾಗ ಒಣ ಮೆನಸು ಮುರಿದು ಹಾಕಿ, ನಂತರ ಪಲಾವ್ ಎಲೆ ಅಥವಾ ಸ್ವಲ್ಪ ಕರಿಬೇವು ಹಾಕಿ ಲವಂಗ ಸೇರಿಸಿ. * ನಂತರ ಬೇಯಿಸಿದ ಅಕ್ಕಿ- ಬೇಳೆ ಸೇರಿಸಿ, ಅದಕ್ಕೆ ಸ್ವಲ್ಪ ಖಾರ ಪುಡಿ (ಬೇಕಿದ್ದರೆ), ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಡ್ರೈಫ್ರೂಟ್ಸ್ ಪುಡಿ ಸೇರಿಸಿ2-3 ನಿಮಿಷ ಕುದಿಸಿದರೆ ಆರೊಗ್ಯಕರವಾದ ಕಿಚಡಿ ರೆಡಿ. * ಇದನ್ನು ಮೊಸರು ಜೊತೆ ಸೇರಿಸಿ ಸವಿಯಲು ನೀಡಿ.ಸಲಹೆ: ಇದನ್ನು ನೀವು ಮಗುವಿಗೆ 8 ತಿಂಗಳು ಕಳೆದ ಮೇಲೆ ದಿನದಲ್ಲಿ ಒಂದು ಹೊತ್ತು ನೀಡಿದರೆ ಅವರಿಗೆ ಪೌಷ್ಠಿಕ ಆಹಾರ ಸಿಗುವುದು. ಒಂದು ವರ್ಷದ ಕೆಳಗಿನ ಮಕ್ಕಳಿಗೆ ಡ್ರೈಫ್ರೂಟ್ಸ್ ಪುಡಿ ಬಳಸಬೇಡಿ.
ಸರ್ವ್ - 1 ಪ್ಲೇಟ್ ಪ್ರೊಟೀನ್ - 6ಗ್ರಾಂ ಕಾರ್ಬ್ಸ್ - 22ಗ್ರಾಂ ನಾರಿನಂಶ - 3ಗ್ರಾಂ