ಕಾಸರಗೋಡು: ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯನ್ವಯ ಪೈಪು ಅಳವಡಿಸಿ ಗ್ರಾಮೀಣ ಪ್ರದೇಶಗಳ ಮನೆ ಬಾಗಿಲಿಗೆ ಶುದ್ಧ ನೀರು ಪೂರೈಸುವ ಕ್ರಿಯಾ ಯೋಜನೆ ಕಾಸರಗೋಡು ಜಿಲ್ಲೆಯಲ್ಲಿ ಪೂರ್ತಿಗೊಂಡಿದೆ.
ಜಿಲ್ಲೆಯ 38 ಗ್ರಾಮ ಪಂಚಾಯಿತಿಗಳ 2.10 ಲಕ್ಷ ಮನೆಗಳಿಗೆ ಜಲಜೀವನ ಮಿಷನ್ ಮೂಲಕ ನೀರು ಪೂರೈಸುವ ಯೋಜನೆಯಿರಿಸಿಕೊಳ್ಳಲಾಗಿದೆ. ಆಯಾ ಗ್ರಾಮ ಪಂಚಾಯಿತಿಗಳು ತಯಾರಿಸಿರುವ ಕ್ರಿಯಾಸಮಿತಿಯನ್ವಯ ಮನೆ ಬಾಗಿಲಿಗೆ ಪೈಪು ಅಳವಡಿಸಿ ನೀರು ಪೂರೈಸಲಾಗುವುದು. ಜಿಲ್ಲೆಯಲ್ಲಿ ಎರಡುವರೆ ಲಕ್ಷ ಮನೆಗಳಿದ್ದು, ಇದರಲ್ಲಿ 40ಸಾವಿರ ಪಂಚಾಯಿತಿ ಮಟ್ಟದ ಜಲನಿಧಿ ಯೋಜನೆಯನ್ವಯ ನೀರು ಪೂರೈಸಲಾಗುತ್ತಿದೆ. 2020ರಲ್ಲಿ ಜಲಜೀವನ್ ಮಿಶನ್ ಚಟುವಟಿಕೆ ಜಿಲ್ಲೆಯಲ್ಲಿ ಆರಂಭಗೊಂಡಿತ್ತು.