ಮಂಜೇಶ್ವರ: ಮೀಂಜ ಗ್ರಾಮದ ಕೊಳಚಪ್ಪು ನಿವಾಸಿ, ಕ್ಯಾಂಪ್ಕೋ ಸಂಸ್ಥೆ ಸದಸ್ಯೆ ಬಿ.ಸತ್ಯವತಿ ಭಟ್ ಇವರ ಪುತ್ರ ಮಹಾಬಲ ತಿಲಕ ಅವರಿಗೆ ತೆರೆದ ಹೃದಯ ಶಾಸ್ತ್ರ ಚಿಕಿತ್ಸೆಗಾಗಿ ಕ್ಯಾಂಪೆÇ್ಕೀ ವತಿಯಿಂದ ಬಿಡುಗಡೆಮಾಡಲಾದ ಧನಸಹಾಯದ ಚೆಕ್ ವಿತರಣೆ ನಡೆಯಿತು. ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಅವರು ರೂಪಾಯಿ 2,00,000 ಚೆಕ್ಕನ್ನು ಸತ್ಯವತಿ ಕುಟುಂಬಕ್ಕೆ ಹಸ್ತಾಂತರಿಸಿದರು. ಸಂಸ್ಥೆಯ ನಿರ್ದೇಶಕ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕ್ಯಾಂಪ್ಕೋ ಪ್ರಾದೇಶಿಕ ವ್ಯವಸ್ಥಾಪಕ ಗಿರೀಶ್ ಇ ಹಾಗೂ ಶಾಖಾ ಸಿಬ್ಬಂದಿ ಉಪಸ್ಥಿತರಿದರು.