ಕಾಸರಗೋಡು: ಕೇರಳ ರಾಜ್ಯೋದಯ ದಿನಾಚರಣೆ ಮತ್ತು ಆಡಳಿತ ಭಾಷಾ ಸಪ್ತಾಹ ಉದ್ಘಾಟನೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಸಾರ್ವಜನಿಕ ಸಂಪರ್ಕ ಇಲಾಖೆಯ ಪಿ.ಆರ್.ಛೇಂಬರ್ ನಲ್ಲಿ ನಿನ್ನೆ ಜರಗಿತು.
ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಮಂಡಳಿ ಜಂಟಿ ವತಿಯಿಂದ ಸಮಾರಂಭ ನಡೆಯಿತು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಉದ್ಘಾಟಿಸಿದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಅಧ್ಯಕ್ಷತೆ ವಹಿಸಿದ್ದರು. ಕನ್ನಡ, ತುಳು, ಆಂಗ್ಲ ಭಾಷೆ, ಸಾಹಿತ್ಯಗಳಲ್ಲಿ ಅಪಾರ ಸಾಧನೆ ನಡೆಸಿದ ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಮತ್ತು ಮಲೆಯಾಳಂ ಸಾಹಿತಿ, ಪತ್ರಕರ್ತ ರವೀಂದ್ರನ್ ಪಾಡಿ ಅವರನ್ನು ಅಭಿನಂದಿಸಲಾಯಿತು. ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಮತ್ತು ಸತೀಶನ್ ಪೆÇಯ್ಯಕ್ಕೋಡು ಅಭಿನಂದನೆ ಭಾಷಣ ಮಾಡಿದರು. ಸಹಾಯಕ ಜಿಲ್ಲಾಧಿಕಾರಿ(ಎಲ್.ಆರ್.) ರವಿಕುಮಾರ್ ಆಡಳಿತ ಭಾಷಾ ಪ್ರತಿಜ್ಞೆ ಪಠಿಸಿದರು. ಗ್ರಂಥಾಲೋಕಂ ಸಂಪಾದಕ ಪಿ.ವಿ.ಕೆ.ಪನೆಯಾಲ್ ಪ್ರಧಾನ ಭಾಷಣ ಮಾಡಿದರು. ಜಿಲ್ಲಾಧಿಕಾರಿ ಕಚೇಋಇ ಸಇಬ್ಬಂದಿ ಮಂಡಳಿಯ ಜಿ.ಸುರೇಶ್ ಬಾಬು ಉಪಸ್ಥಿತರಿದ್ದರು. ಪಿ.ಆರ್.ಡಿ. ಸಹಾಯಕ ಸಂಪಾದಕ ಪಿ.ಪಿ.ವಿನೀಶ್ ಸ್ವಾಗತಿಸಿದರು. ಮಾಹಿತಿ ಸಹಾಯಕ ಅಧಿಕಾರಿ ಜಿ.ಎನ್.ಪ್ರದೀಪನ್ ವಂದಿಸಿದರು.