ಸಮರಸ ಚಿತ್ರ ಸುದ್ದಿ:ಕಾಸರಗೋಡು: ಸಪ್ಲೈಕೋ ನ್ಯಾಶನಲ್ ಎಂಪ್ಲೋಯೀಸ್ ಅಸೋಸಿಯೇಶನ್(ಐಎನ್‍ಟಿಯುಸಿ)ವತಿಯಿಂದ ಕಾಸರಗೋಡಿನಿಂದ ತಿರುವನಂತಪುರ ವರೆಗೆ ಆಯೋಜಿಸಲಾಗಿದ್ದ ಹಕ್ಕು ಸಂರಕ್ಷಣಾ ವಾಹನಪ್ರಚಾರ ಜಾಥಾಕ್ಕೆ ಕಾಸರಗೋಡಿನಲ್ಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಚಾಲನೆ ನೀಡಿದರು. ಶಾಸಕ ಎನ್.ಎ ನೆಲ್ಲಿಕುನ್ನು ಮುಖ್ಯ ಭಾಷಣ ಮಾಡಿದರು. ಜಾಥಾ ನಾಯಕ ಆರ್. ವಿಜಯ ಕುಮಾರ್, ಟಿ.ಎ ಶಾಜಿ ಜೋಸ್, ಕೆ.ವಿ ದಾಮೋದರನ್, ಎ.ಶಾಹುಲ್ ಹಮೀದ್ ಮುಂತಾದವರು ಉಪಸ್ಥಿತರಿದ್ದರು.