ತಿರುವನಂತಪುರ: ವರದಕ್ಷಿಣೆ ವಿರುದ್ಧ ಪ್ರಮಾಣ ವಚನ ಸ್ವೀಕರಿಸಲು ಕೇರಳ ಮಹಿಳಾ ಆಯೋಗ ಕರೆ ನೀಡಿದೆ. ಮಹಿಳಾ ಆಯೋಗದ ಅಧ್ಯಕ್ಷೆ ಪಿ ಸತಿದೇವಿ ಪೋಸ್ಟರ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವರದಕ್ಷಿಣೆ ವಿರುದ್ಧ ಕುಟುಂಬಗಳು ಆನ್‍ಲೈನ್ ಅಭಿಯಾನದ ಭಾಗವಾಗಿ ವರದಕ್ಷಿಣೆ ವಿರೋಧಿ ಪ್ರತಿಜ್ಞೆಯನ್ನು ಹಂಚಿಕೊಳ್ಳಲಾಗಿದೆ.
ವರದಕ್ಷಿಣೆಯ ಸಾಮಾಜಿಕ ಪಿಡುಗಿನ ವಿರುದ್ಧ ಕೇರಳದ ಕುಟುಂಬಗಳೊಂದಿಗೆ ಕೇರಳ ಮಹಿಳಾ ಆಯೋಗವು 'ಸಕುಟುಂಬಂ ಅಗೈಸ್ಟ್ ಡೌರಿ' ಎಂಬ ಸಾಮೂಹಿಕ ಅಭಿಯಾನವಾಗಿದೆ.
ವರದಕ್ಷಿಣೆ ವಿರೋಧಿ ಪ್ರತಿಜ್ಞೆ:
ವರದಕ್ಷಿಣೆ ನೀಡುವುದು, ಕೊಳ್ಳುವುದು ಮತ್ತು ಭರವಸೆ ನೀಡುವುದು ವರದಕ್ಷಿಣೆ ನಿಷೇಧ ಕಾಯಿದೆ, 1961 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ನನಗೆ ತಿಳಿದಿದೆ. ನಾನು ಅಥವಾ ನನ್ನ ಕುಟುಂಬದಲ್ಲಿ ಯಾರೂ ವರದಕ್ಷಿಣೆ ಕೇಳುವುದಿಲ್ಲ ಅಥವಾ ಸ್ವೀಕರಿಸುವುದಿಲ್ಲ. ನನ್ನ ಸಂಬಂಧಿಕರು ಮತ್ತು ಸ್ನೇಹಿತರ ಮೂಲಕ ಈ ಸಂದೇಶವನ್ನು ಹರಡಲು ನಾನು ಬದ್ಧನಾಗಿದ್ದೇನೆ. ವರದಕ್ಷಿಣೆಗೆ ಬೇಡಿಕೆ ಇಟ್ಟಿರುವುದು ಅಥವಾ ಪಡೆದಿರುವುದು ನನ್ನ ಗಮನಕ್ಕೆ ಬಂದರೆ ಯಾವುದೇ ರಾಜಿ ಇಲ್ಲದೇ ಆ ಮಾಹಿತಿಯನ್ನು ವರದಕ್ಷಿಣೆ ನಿಷೇಧ ಅಧಿಕಾರಿಯ ಗಮನಕ್ಕೆ ತಂದು ನನ್ನ ಜೀವನದ ಮೂಲಕ ಸಾಮಾಜಿಕ ಪಿಡುಗು ತೊಡೆದುಹಾಕುವ ಮಹತ್ತರ ಸಂದೇಶವನ್ನು ಇತರರಿಗೆ ತಲುಪಿಸುವುದಾಗಿ ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ. ಈ ಮಣ್ಣಿನಿಂದ ವರದಕ್ಷಿಣೆ ಪಿಡುಗನ್ನು ಈ ಮೂಲಕ ನಿಯಂತ್ರಿಸಲು ಕಟಿಬದ್ದನಾಗಿದ್ದೇನೆ.