ಕಾಸರಗೊಡು: ಕಾಸರಗೋಡು ಮೆಡಿಕಲ್ ಕಾಲೇಜು ನಿರ್ಮಾಣ ಪ್ರಗತಿಯತ್ತ ಸಾಗುತ್ತಿದೆ. ಇದರ ವಿರುದ್ಧ ಕೇಳಿಬರುತ್ತಿರುವ ಪ್ರಚಾರ ಸತ್ಯಕ್ಕೆ ದೂರವಾದುದು ಎಂದು ಆರೋಗ್ಯ ಇಲಾಖೆ ಅಡೀಷನಲ್ ಚೀಫ್ ಸೆಕ್ರಟರಿ ಡಾ.ಆಶಾ ಥಾಮಸ್ ತಿಳಿಸಿದರು.
ಕಾಸರಗೋಡು ಮೆಡಿಕಲ್ ಕಾಲೇಜು ಡಿ.1ರಿಂದ ಪ್ರಾಥಮಿಕ ಆರೋಗ್ಯ ಕೇಂದವಾಗಿ ಚಟುವಟಿಕೆ ಆರಂಭಿಸಲಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಮೆಡಿಕಲ್ ಕಾಲೇಜಿನ ಆಕಾಡೆಮಿಕ್ ಬ್ಲೋಕ್ ನಿರ್ಮಾಣ ಪೂರ್ಣಗೊಂಡಿದೆ. ಆಸ್ಪತ್ರೆ ಬ್ಲಾಕ್ ನ ನಿರ್ಮಾಣ ನಡೆದುಬರುತ್ತಿದೆ. ಮೆಡಿಕಲ್ ಕಾಲೇಜಿನ ಔಟ್ ಪೇಷೆಂಟ್ ಸೇವೆಗಳು ತಕ್ಷಣ ಆರಂಭಿಸಲಾಗುವುದು ಎಂದು ಚೀಫ್ ಸೆಕ್ರಟರಿ ತಿಳಿಸಿರುವರು.