ಕಾಸರಗೋಡು: ಕಾರ್ತಿಕ ಮಾಸದ ಕೃತ್ತಿಕಾ ನಕ್ಷತ್ರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಜನ್ಮ ನಕ್ಷತ್ರವಾಗಿದ್ದು, ಈ ದಿನ ಕೂಡ್ಲು ಬಾದಾರದ ಶೇಷವನ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಹಾ ದೀಪೋತ್ಸವ ಆಚರಿಸಲಾಯಿತು.
ಈ ಸಂದರ್ಭ ವೇದಮೂರ್ತಿಕೋಣಮ್ಮೆ ಮಹಾದೇವ ಭಟ್ಟ ಮತ್ತುಶಿಷ್ಯ ವೃಂದ,ಹವ್ಯಕ ಪರಿಷತ್ತು ಮುಳ್ಳೇರಿಯ ಮಂಡಲ ಇವರಿಂದವೇದ ಪಾರಾಯಣ, ವಿಶೇಷ ಅಲಂಕಾರ ಸಹಿತ ದೀಪೋತ್ಸವದೊಂದಿಗೆ ಕಾರ್ತಿಕ ಪೂಜೆನಡೆಯಿತು. ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿದೇವಸ್ಥಾನ ಟ್ರಸ್ಟ್ , ಯುವಕ ಸಂಘ, ಮಹಿಳಾ ಸಂಘಕಾರ್ಯಕ್ರಮದ ನೇತೃತ್ವ ವಹಿಸಿದರು.