ಕುಂಬಳೆ: ಸೂರಂಬೈಲು ಸಮೀಪದ ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಾಲಯದ ಕಾರ್ತಿಕ ಮಾಸದ ಕಾರ್ತಿಕ ಪೂಜೆಯ ಸಂದರ್ಭದಲ್ಲಿ ಕಂಬಾರು ಕೇಶವ ಭಟ್ ಇವರ ನೇತೃತ್ವದಲ್ಲಿ ಯಕ್ಷಗಾನ ಕೂಟ ನಡೆಯಿತು.
ವೀರಮಣಿ ಕಾಳಗ ಪ್ರಸಂಗದ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಕಂಬಾರು ಕೇಶವ ಭಟ್, ಶಿವಶಂಕರ ಭಟ್ ತಲ್ಪನಾಜೆ,ವಸಂತ ಕುಮಾರ ಡಿ.ಜಿ., ಲಕ್ಷ್ಮೀಶ ಬೇಂಗ್ರೋಡಿ, ಚೆಂಡೆ ಮದ್ದಳೆಯಲ್ಲಿ ಲಕ್ಷ್ಮೀಶ ಮಧೂರು, ಕೃಷ್ಣಮೂರ್ತಿ ಪಾಡಿ ಸಹಕರಿಸಿದರು. ಅರ್ಥಧಾರಿಗಳಾಗಿ ಡಾ. ಬೇ.ಸೀ ಗೋಪಾಲಕೃಷ್ಣ ಭಟ್, ಸದಾಶಿವ ನಾಯ್ಕಾಪು, ಗೋಪಾಲಕೃಷ್ಣ ನಾಯಕ್, ಶಿವಾನಂಂದ ಕುಂಬಳೆ, ಬಾಲಕೃಷ್ಣ ಆಚಾರ್ಯ ನೀರ್ಚಾಲು, ನಾರಾಯಣ ಹೆಗಡೆ, ಸದಾಶಿವ ಮುಳಿಯಡ್ಕ ಮುಂತಾದವರ ಸಹಕರಿಸಿದರು.