ಕಬ್ಬಿಣವು ಅನೇಕ ದೈಹಿಕ ಕಾರ್ಯಗಳಿಗೆ ಪ್ರಮುಖವಾಗಿದ್ದು, ಹಿಮೋಗ್ಲೋಬಿನ್ ಅನ್ನು ಉತ್ಪಾದಿಸುವುದರ ಜೊತೆಗೆ ಹಾನಿಗೊಳಗಾದ ಜೀವಕೋಶಗಳು, ಅಂಗಾಂಶಗಳು ಮತ್ತು ಅಂಗಗಳಿಗೆ ಆಮ್ಲಜನಕವನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ದೇಹದಲ್ಲಿ ಸಾಕಷ್ಟು ಕಬ್ಬಿಣದ ಅಂಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿಯು ಉತ್ತಮವಾಗಿದ್ದರೆ, ನಿಮ್ಮ ದೇಹ ಮತ್ತು ಮನಸ್ಸು ಆರೋಗ್ಯಕರವಾಗಿರುತ್ತದೆ.
ಇಷ್ಟು ಪ್ರಾಮಖ್ಯತೆ ಪಡೆದಿರುವ ಕಬ್ಬಿಣಕ್ಕೆ ದೇಹದಲ್ಲಿ ಕೊರತೆಯುಟಾದರೆ, ನಾನಾ ಸಮಸ್ಯೆಗಳು ಉದ್ಭವಿಸುತ್ತವೆ. ಅದರಲ್ಲೂ ಮಹಿಳೆಯರು ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ನಾವಿಂದು, ದೇಹದಲ್ಲಿ ಕಬ್ಬಿಣದ ಕೊರತೆಯುಂಟಾದರೆ, ಆಗುವ ಬದಲಾವಣೆಗಳೇಣು ಎಂಬುದನ್ನು ಹೇಳಲಿದ್ದೇವೆ. ಈ ಮೂಲಕ ನೀವು ಎಚ್ಚರಿಕೆಯಿಂದ ಇರಬಹದು.
ತೀವ್ರ ದೌರ್ಬಲ್ಯ ಮತ್ತು ಬಳಲಿಕೆ ಕಬ್ಬಿಣದ ಕೊರತೆಯಿರುವ ವ್ಯಕ್ತಿಯು ಯಾವಾಗಲೂ ವೀಕ್‌ನೆಸ್ ಮತ್ತು ಆಯಾಸವನ್ನು ಅನುಭವಿಸುತ್ತಾನೆ. ಕಬ್ಬಿಣವು ಹಿಮೋಗ್ಲೋಬಿನ್ ಅನ್ನು ರೂಪಿಸಲು ಸಹಾಯ ಮಾಡುವ ಖನಿಜವಾಗಿದ್ದು, ಇದು ದೇಹದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸಲು ಕಾರಣವಾಗಿದೆ. ಕಬ್ಬಿಣದ ಕೊರತೆಯು ಹಿಮೋಗ್ಲೋಬಿನ್ ಕೊರತೆಗೆ ಕಾರಣವಾಗುತ್ತದೆ, ಅಂದರೆ ಕಡಿಮೆ ಆಮ್ಲಜನಕವು ನಿಮ್ಮ ಅಂಗಾಂಶಗಳು ಮತ್ತು ಸ್ನಾಯುಗಳನ್ನು ತಲುಪುತ್ತದೆ, ಇದು ಶಕ್ತಿಯ ಕೊರತೆಗೆ ಕಾರಣವಾಗುತ್ತದೆ.
ಉಸಿರಾಟದ ತೊಂದರೆ : ಮೇಲೆ ಹೇಳಿದಂತೆ, ಕಬ್ಬಿಣವು ಹಿಮೋಗ್ಲೋಬಿನ್ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ, ಇದು ದೇಹದ ವಿವಿಧ ಭಾಗಗಳಿಗೆ ಸಾಕಷ್ಟು ಆಮ್ಲಜನಕವನ್ನು ಸಾಗಿಸುತ್ತದೆ ಆದ್ದರಿಂದ ಕಬ್ಬಿಣದ ಮಟ್ಟವು ಕಡಿಮೆಯಾದಾಗ, ಹಿಮೋಗ್ಲೋಬಿನ್ ಮತ್ತು ಆಮ್ಲಜನಕದ ಮಟ್ಟಗಳು ಸಹ ಕಡಿಮೆಯಾಗುತ್ತವೆ ಎಂದರ್ಥ. ಸ್ನಾಯುಗಳಲ್ಲಿನ ಆಮ್ಲಜನಕದ ಕೊರತೆಯಿಂದಾಗಿ, ದೇಹವು ಹೆಚ್ಚು ಕೆಲಸ ಮಾಡಬೇಕಾಗುತ್ತದೆ, ಇದರಿಂದಾಗಿ ಉಸಿರಾಟದ ತೊಂದರೆ ಪ್ರಾರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ನಡೆಯುವುದು, ಮೆಟ್ಟಿಲು ಹತ್ತುವುದು, ವ್ಯಾಯಾಮ ಮಾಡುವುದು ಕೂಡ ಕಷ್ಟವಾಗುತ್ತದೆ.
ಹೆಚ್ಚಿದ ಹೃದಯ ಬಡಿತ: ದೇಹದಲ್ಲಿ ಕಬ್ಬಿಣದ ಕೊರತೆ ಮತ್ತು ಹಿಮೋಗ್ಲೋಬಿನ್ ಮಟ್ಟಗಳು ಕಡಿಮೆಯಾಗಿರುವ ಸಮಯದಲ್ಲಿ, ದೇಹದಾದ್ಯಂತ ಆಮ್ಲಜನಕವನ್ನು ಪಂಪ್ ಮಾಡಲು ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ. ಇದು ಅನಿಯಮಿತ ಹೃದಯ ಬಡಿತ ಅಥವಾ ಹೆಚ್ಚಿದ ಹೃದಯ ಬಡಿತಕ್ಕೆ ಕಾರಣವಾಗಬಹುದು.ತಲೆತಿರುಗುವಿಕೆ ಮತ್ತು ತಲೆನೋವು: ಕಬ್ಬಿಣದ ಕೊರತೆಯು ಮೆದುಳಿಗೆ ಆಮ್ಲಜನಕದ ಹರಿವನ್ನು ಮಿತಿಗೊಳಿಸುತ್ತದೆ. ಇದರಿಂದ ತಲೆನೋವು ಮತ್ತು ತಲೆತಿರುಗುವಿಕೆಯನ್ನು ಹೆಚ್ಚು ಸಾಮಾನ್ಯವಾಗುತ್ತದೆ. ಮಹಿಳೆಯರು ಆಗಾಗ್ಗೆ ಇದಕ್ಕೆ ಬಲಿಯಾಗುತ್ತಾರೆ.
ಚರ್ಮ ತೆಳುವಾಗುವಿಕೆ: ಕೆಂಪು ರಕ್ತ ಕಣಗಳಲ್ಲಿರುವ ಹಿಮೋಗ್ಲೋಬಿನ್ ರಕ್ತಕ್ಕೆ ಕೆಂಪು ಬಣ್ಣವನ್ನು ನೀಡುತ್ತದೆ. ಒಬ್ಬ ವ್ಯಕ್ತಿಯು ಕಬ್ಬಿಣದ ಕೊರತೆಯಿಂದ ಬಳಲುತ್ತಿದ್ದರೆ, ಹಿಮೋಗ್ಲೋಬಿನ್ ಉತ್ಪಾದನೆಯ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ಚರ್ಮವು ಅದರ ಗುಲಾಬಿ ಬಣ್ಣ ಮತ್ತು ಉಷ್ಣತೆಯನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಮುಖ, ಒಸಡುಗಳು, ಉಗುರುಗಳು ಮತ್ತು ಕಣ್ಣಿನ ರೆಪ್ಪೆಯ ಒಳಭಾಗವು ಹಳದಿ ಬಣ್ಣಕ್ಕೆ ತಿರುಗಬಹುದು. ಇದರಿಂದ ವ್ಯಕ್ತಿಯು ರಕ್ತಹೀನತೆಯಿಂದ ಬಳಲುತ್ತಿದ್ದಾನೆ ಎಂಬುದು ಸ್ಪಷ್ಟವಾಗುತ್ತದೆ. ಈ ಸಂದರ್ಭದಲ್ಲಿ, ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.
ಊತ ಮತ್ತು ಗಂಟಲು ಮತ್ತು ಬಾಯಿ ನೋವು: ನಿಮ್ಮ ಬಾಯಿ ಮತ್ತು ನಾಲಿಗೆ ಹಲವಾರು ವಿಧಗಳಲ್ಲಿ ಕಬ್ಬಿಣದ ಕೊರತೆಯನ್ನು ಸೂಚಿಸುತ್ತದೆ. ನಿಮ್ಮ ನಾಲಿಗೆ ಅಥವಾ ಬಾಯಿಯಲ್ಲಿ ಕೆಂಪು ಮತ್ತು ಊತ ಇದ್ದರೆ, ದೇಹವು ಸಾಕಷ್ಟು ಕಬ್ಬಿಣದ ಕೊರತೆಯನ್ನು ಹೊಂದಿದೆ ಎಂದರ್ಥ. ಇತರ ರೋಗಲಕ್ಷಣಗಳೆಂದರೆ, ಒಣ ಬಾಯಿ, ಸುಡುವಿಕೆ, ಬಾಯಿಯ ಬದಿಗಳಲ್ಲಿ ಕೆಂಪು ಬಿರುಕುಗಳು ಮತ್ತು ಬಾಯಿ ಹುಣ್ಣುಗಳನ್ನು ಒಳಗೊಂಡಿರಬಹುದು.