HEALTH TIPS

ನಿಮ್ಮ ಕೂದಲು ಹೀಗಾಗುತ್ತಿದ್ದರೆ, ಅದಕ್ಕೆ ಪ್ರೋಟೀನ್ ಕೊರತೆಯಾಗಿದೆ ಎಂದರ್ಥ

                ಪ್ರೋಟೀನ್ ನಿಮ್ಮ ಕೂದಲಿಗೆ ಅಗತ್ಯವಾಗಿ ಬೇಕಾಗಿರುವಂತದ್ದು, ಒಂದು ರೀತಿಯಲ್ಲಿ ಕೂದಲಿನ ಬೆನ್ನುಲುಬೆಂದರೆ ತಪ್ಪಾಗಲ್ಲ. ಏಕೆಂದರೆ ನಿಮ್ಮ ಕೂದಲು ಮುಖ್ಯವಾಗಿ ಕೆರಾಟಿನ್‌ನಿಂದ ಮಾಡಲ್ಪಟ್ಟಿದ್ದು, ಪ್ರೋಟೀನ್ ಕೂಡ ಒಂದು ರೀತಿಯ ಕೆರಾಟಿನ್ ಆಗಿದೆ. ಆದ್ದರಿಂದ, ನಿಮ್ಮ ಕೂದಲು ಆರೋಗ್ಯಕರವಾಗಿರಬೇಕೆಂದರೆ, ಸಾಕಷ್ಟು ಪ್ರೋಟೀನ್ ಇರಬೇಕು. ಆದ್ದರಿಂದ, ನಿಮ್ಮ ಕೂದಲಿಗೆ ಪ್ರೋಟೀನ್ ಕೊರತೆಯಾಗುವುದು ಒಳ್ಳೆಯ ಸಂಕೇತವಲ್ಲ. ಇದನ್ನು ತಕ್ಷಣ ಗಮನಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು.

                    ಕೂದಲಿನ ಸಾಂದ್ರತೆ ಕಡಿಮೆಯಿರುವುದು: ನಿಮ್ಮ ಕೂದಲು ಕಡಿಮೆ ದಟ್ಟತೆಯನ್ನು ಹೊಂದಿದ್ದರೆ, ಅದು ಪ್ರೋಟೀನ್ ಕೊರತೆಯನ್ನು ಸೂಚಿಸುತ್ತದೆ. ಜೊತೆಗೆ ನಿಮ್ಮ ಕೂದಲನ್ನು ಸ್ಪರ್ಶಿಸುವಾಗ ದುರ್ಬಲವಾಗಿರುತ್ತದೆ. ಇದರರ್ಥ ನಿಮ್ಮ ಕೂದಲು ಕಡಿಮೆ ಸಾಂದ್ರತೆಯನ್ನು ಹೊಂದಿದೆ ಎಂದರ್ಥ. ಅಂದರೆ ನಿಮ್ಮ ಕೂದಲಿನ ರಚನೆಯು ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳಲು ಬಿಡುವುದಿಲ್ಲ. ಇದರಿಂದ ಕೂದಲು ಉದುರಲು ಪ್ರಾರಂಭವಾಗಿ, ದಟ್ಟತೆ ಕಡಿಮೆಯಾಗುವುದು.
               ಹೆಚ್ಚು ಫ್ರಿಜಿಯಾಗುವುದು: ಹವಾಮಾನದಲ್ಲಿ ಯಾವುದೇ ಬದಲಾವಣೆಯಿಲ್ಲದೆ ನಿಮ್ಮ ಕೂದಲು ಸಾಮಾನ್ಯಕ್ಕಿಂತ ಹೆಚ್ಚು ಫ್ರಿಜ್ ಆಗಿದ್ದರೆ ಅಥವಾ ಹೇರ್ ಜೆಲ್ ಅನ್ನು ಹಚ್ಚಿ ಏನೇ ಮಾಡಿದರೂ ಅದು ಸರಿಹೋಗದೇ, ಫ್ರಿಜ್ ಆಗಿದ್ದರೂ ಸಹ, ಇದು ನಿಮ್ಮ ಕೂದಲಿಗೆ ಪ್ರೋಟೀನ್ ಅಗತ್ಯವಿದೆ ಎಂಬುದರ ಸಂಕೇತವಾಗಿದೆ.
          ಬೌನ್ಸ್ ಇಲ್ಲದಿರುವುದು: ನಿಮ್ಮ ಕೂದಲಿಗೆ ಪ್ರೋಟೀನ್ ಕೊರತೆಯಿದ್ದರೆ, ಅದರ ಪರಿಮಾಣವು ಕಡಿಮೆಯಾಗಬಹುದು. ಇದರಿಂದ ಕೂದಲಿನ ಬೌನ್ಸಿನೆಸ್ ಇಲ್ಲದಂತಾಗುತ್ತದೆ. ಉತ್ತಮವಾದ ಕೂದಲಿಗೆ ಪ್ರೋಟೀನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಆದರೆ ಅದೇ ಕೊರತೆಯಿದ್ದರೆ, ಅದು ದೊಡ್ಡ ಸಮಸ್ಯೆಯಾಗುವುದು.
               ನಿಮ್ಮ ಕೂದಲಿಗೆ ಪ್ರೋಟೀನ್ ಸೇರಿಸುವುದು ಹೇಗೆ?: ಪ್ರೋಟೀನ್ ಸಮೃದ್ಧ ಆಹಾರ: ನಿಮ್ಮ ಕೂದಲಿಗೆ ಪ್ರೋಟೀನ್ ಸೇರಿಸುವ ಮೊದಲ ಮತ್ತು ಅಗ್ರಗಣ್ಯ ಮಾರ್ಗವೆಂದರೆ ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದು. ಸಮತೋಲಿತ ಆಹಾರದ ಅಗತ್ಯವಿದೆ ಎಂದು ನಮಗೆ ತಿಳಿದಿದೆ ಆದರೆ ಇಂತಹ ಸಂದರ್ಭಗಳಲ್ಲಿ, ನಿಮ್ಮ ಆಹಾರದಲ್ಲಿ ಪ್ರೋಟೀನ್ ಸೇವನೆಯನ್ನು ಹೆಚ್ಚಿಸುವುದು ಒಳ್ಳೆಯದು. ಹಾಲು, ಮೊಟ್ಟೆ, ಮಾಂಸ, ಬೇಳೆಕಾಳುಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಪ್ರೋಟೀನ್ ಹೊಂದಿರುವ ಹಲವಾರು ಆಹಾರಗಳಿವೆ. ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ ಮತ್ತು ಶೀಘ್ರದಲ್ಲೇ ಫಲಿತಾಂಶಗಳನ್ನು ನೋಡುತ್ತೀರಿ.
               ಪ್ರೋಟೀನ್ ಹೊಂದಿರುವ ಕೂದಲು ಉತ್ಪನ್ನಗಳು: ನೀವು ಪ್ರೋಟೀನ್ ಹೊಂದಿರುವ ಕೂದಲು ಉತ್ಪನ್ನಗಳನ್ನು ಬಳಸಲು ಪ್ರಾರಂಭಿಸಬೇಕು. ಆದಾಗ್ಯೂ, ಮೇಯನೇಸ್, ಮೊಟ್ಟೆ ಮತ್ತು ಇತರ ವಸ್ತುಗಳಂತಹ ಮನೆಮದ್ದುಗಳು ಬೇಡ. ಇವುಗಳು ನಿಮ್ಮ ಕೂದಲನ್ನು ಕಂಡೀಷನ್ ಮಾಡುತ್ತವೆ, ಆದರೆ ನೈಸರ್ಗಿಕ ರೂಪದಲ್ಲಿ ಇರುವ ಪ್ರೊಟೀನ್ ಕೂದಲಿನ ಆಳಕ್ಕೆ ಇಳಿಯುವುದು ಬಹಳ ಕಷ್ಟ. ಇದಕ್ಕಾಗಿ, ನಿಮಗೆ ಹೈಡ್ರೊಲೈಸ್ಡ್ ಪ್ರೊಟೀನ್ಗಳು ಎಂದು ಕರೆಯಲ್ಪಡುವ ಸಣ್ಣ ತುಂಡುಗಳಾಗಿ ವಿಭಜಿಸಲ್ಪಟ್ಟ ಪ್ರೋಟೀನ್ಗಳು ಬೇಕಾಗುತ್ತವೆ. ಹೈಡ್ರೊಲೈಸ್ಡ್ ಪ್ರೊಟೀನ್‌ಗಳನ್ನು ಒಳಗೊಂಡಿರುವ ಹಲವಾರು ಕೂದಲು ಉತ್ಪನ್ನಗಳಿವೆ. ಅದನ್ನು ತಕ್ಷಣ ನಿಮ್ಮ ಕೂದಲ ರಕ್ಷಣೆಯ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು .




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries