ಮಂಜೇಶ್ವರ: ಕೊರಗ ವಲಯದ ಪ್ರಥಮ ಕುಟುಂಬಶ್ರೀ ಸಹಾಯ ಗುಂಪನ್ನು ಮಂಜೇಶ್ವರ ಪಂಚಾಯತಿಯ ಗೇರುಕಟ್ಟೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಸಹಾಯ ಗುಂಪು ಹತ್ತು ಸದಸ್ಯರನ್ನು ಹೊಂದಿದೆ. ಜಿಲ್ಲೆಯ ಪ್ರಾಚೀನ ಬುಡಕಟ್ಟು ಜನಾಂಗಕ್ಕೆ ಸೇರಿದ ಕೊರಗ ಪ್ರದೇಶದಲ್ಲಿ ಐದು ಸಹಾಯಕ ಗುಂಪುಗಳನ್ನು ರಚಿಸುವ ಗುರಿಯನ್ನು ಕುಟುಂಬಶ್ರೀ ಜಿಲ್ಲಾ ಮಿಷನ್ ಹೊಂದಿದೆ. ಪ್ರಸ್ತುತ ಕೊರಗ ಗ್ರಾಮಗಳಲ್ಲಿ 28 ನೆರೆಹೊರೆ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ.
ಕುಟುಂಬಶ್ರೀಯಲ್ಲಿ ಸದಸ್ಯರಲ್ಲದ 18 ರಿಂದ 40 ವರ್ಷದೊಳಗಿನ ಮಹಿಳೆಯರನ್ನು ಸೇರಿಸಲು ಸಹಾಯಕ ಗುಂಪುಗಳನ್ನು ರಚಿಸಲಾಗಿದೆ. ವಿದ್ಯಾವಂತ ಯುವತಿಯರ ನಿರುದ್ಯೋಗ ಪರಿಹರಿಸಲು, ಸಾರ್ವಜನಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳಲು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸಲು ಸಹಾಯಕ ಗುಂಪುಗಳು ವೇದಿಕೆಯಾಗುತ್ತವೆ.
ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೊ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ರಹಮಾನ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್ ಮುಖ್ಯ ಅತಿಥಿಗಳಾಗಿದ್ದರು. ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಅಬ್ದುಲ್ ಹಮೀದ್, ಮಂಜೇಶ್ವರ ಗ್ರಾಮ ಪಂಚಾಯತಿ ಸದಸ್ಯ ಹಾಜಿರ ಮೂಸಾ, ಕುಟುಂಬಶ್ರೀ ಎಡಿಎಂಗಳಾದ ಪ್ರಕಾಶನ್ ಪಲೈ, ಡಿ.ಹರಿದಾಸ್, ಸಿ.ಎಚ್.ಇಕ್ಬಾಲ್, ಸಿಡಿಎಸ್ ಸದಸ್ಯ ವಿನಯ ಆಳ್ವಾರಿಸ್, ಆದಿರಾ ಕೆ.ಪಿ ಮಾತನಾಡಿದರು. ಜಾನಪದ ಪ್ರಶಸ್ತಿ ಪುರಸ್ಕøತ ಉದಯನ್ ಕುಂಡಂಗುಳಿ ಅವರು 'ಅಮ್ಮ ಮಲಯಾಳಂ ಹಾಡು ಮತ್ತು ಅಧ್ಯಯನ' ಕುರಿತು ತರಗತಿ ನಡೆಸಿದರು. ಮಂಜೇಶ್ವರ ಸಿಡಿಎಸ್ ಅಧ್ಯಕ್ಷೆ ಜ್ಯೋತಿ ಪ್ರಭಾ ಸ್ವಾಗತಿಸಿ, ಡಿಪಿಎಂ ರತ್ನೇಶ್ ವಂದಿಸಿದರು.