ಕೋಝಿಕ್ಕೋಡ್: ಮೊಬೈಲ್ ಕೈಯಿಂದ ಕಿತ್ತುಕೊಂಡ ವಿಚಾರವಾಗಿ ಮನೆಯವರೊಂದಿಗೆ ಜಗಳವಾಡಿ ಬಾಲಕಿಯೊಬ್ಬಳು ಮನೆ ಬಿಟ್ಟು ತೆರಳಿದ ಘಟನೆ ನಡೆದಿದೆ. 14 ವರ್ಷದ ಬಾಲಕಿ ಮನೆಯವರ ಮೇಲೆ ಕೋಪಗೊಂಡು ಮಧ್ಯರಾತ್ರಿ ಮನೆ ಬಿಟ್ಟು ಹೋಗಿದ್ದಾಳೆ.
ಶನಿವಾರ ಘಟನೆ ನಡೆದಿದೆ. ಅತಿಯಾದ ಮೊಬೈಲ್ ಬಳಕೆಯನ್ನು ಗಮನಿಸಿದ ಪಾಲಕರು ಮಗುವಿನ ಬಳಿಯಿದ್ದ ಪೋನ್ ಕೈಯಿಂದ ಕಿತ್ತಿದ್ದರು.
ಪೋಲೀಸರು ಹಾಗೂ ಸ್ಥಳೀಯರ ಹುಡುಕಾಟದ ಬಳಿಕ ಬಾಲಕಿ ಮನೆಯಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಮೊಕೇರಿ ಪೇಟೆಯಲ್ಲಿ ಪತ್ತೆಯಾಗಿದ್ದಾಳೆ. ಹುಡುಗಿ ಮಧ್ಯರಾತ್ರಿಯ ಸುಮಾರಿಗೆ ಪಟ್ಟಣದ ಮುಚ್ಚಿದ ವರಾಂಡದಲ್ಲಿ ಕುಳಿತಿರುವುದು ಕಂಡುಬಂದಿದೆ.
ಬಾಲಕಿ ಮೊಕೇರಿಯಲ್ಲಿರುವ ಬಗ್ಗೆ ಮಾಹಿತಿ ಪಡೆದ ಪೋಲೀಸರು ಠಾಣೆಗೆ ಕರೆದುದೊಯ್ದರು. ಬಳಿಕ ಬಾಲಕಿಯನ್ನು ಪೋಷಕರೊಂದಿಗೆ ಬಿಡುಗಡೆಗೊಳಿಸಲಾಯಿತು.