ಕಾಸರಗೋಡು: ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಒ.ಪಿ. ವಿಭಾಗ ಶೀಘ್ರದಲ್ಲಿ ಆರಂಭಿಸಲಾಗುವುದು ಮತ್ತು ನ್ಯೂರೋಲಜಿಸ್ಟ್ ಸೇವೆ ತಕ್ಷಣ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದರು.
ಉಕ್ಕಿನಡ್ಕದ ಮೆಡಿಕಲ್ ಕಾಲೇಜಿಗೆ ಗುರುವಾರ ಭೇಟಿ ನೀಡಿ ಅವರು ಮಾತನಾಡಿದರು.
ನ್ಯೂರೋಲಜಿಸ್ಟ್ ರ ಸೇವೆ ಅನೇಕ ವರ್ಷಗಳಿಂದ ಕಾಸರಗೋಡು ಜಿಲ್ಲೆಯಿಂದ ಕೇಢಳಿ ಬರುತ್ತಿರುವ ಬೇಡಿಕೆ. ಎಂಡೋಸಲ್ಫಾನ್ ಸಂತ್ರಸ್ತರ ಜಿಲ್ಲೆ ಎಂಬ ನಿಟ್ಟಿನಲ್ಲಿ ಸರಕಾರ ಈ ಬಗ್ಗೆ ವಿಶೇಷ ಕಾಳಜಿ ಹೊಮದಿದೆ. ಇತರ ಸರಕಾರಿ ಆರೋಗ್ಯ ಕೇಂದ್ರಗಲಲ್ಲಿ ನ್ಯೂರೋಲಜಿಸ್ಟ್ ರ ನೇಮಕಾತಿ ನಡೆಸಬೇಕಿದ್ದರೆ ಹುದ್ದೆಯ ಸೃಷ್ಟಿ ನಡೆಯಬೇಕು. ಆದರೆ ಇದಕ್ಕೂ ಮುನ್ನ ನ್ಯೂರೋಲಜಿಸ್ಟ್ ಸೇವೆ ಖಚಿತಪಡಿಸಲಾಗುವುದು ಎಂದು ಸಚಿವೆ ನುಡಿದರು.
ಸದ್ರಿ ನಿರ್ಮಿಸಲಾಗುತ್ತಿರುವ ಆಸ್ಪತ್ರೆಯ ವಿಭಾಗ ನಿಗದಿತ ಸಮಯದಲ್ಲೇ ಪೂರ್ತಿಗೊಳಿಸಲಾಗುವುದು. ಕಾಸರಗೋಡು ಜಿಲ್ಲೆಯ ಮಟ್ಟಿಗೆ ಆರೋಗ್ಯ ವಲಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ 2023-24 ಶೈಕ್ಷಣಿಕ ವರ್ಷದಲ್ಲಿ ಮೆಡಿಕಲ್ ಶಿಕ್ಷಣ ಆರಂಭಿಸುವ ನಿಟ್ಟಿನಲ್ಲಿ ಸರಕಾರ ಯೋಚಿಸುತ್ತಿದೆ. ಈ ಹಿಂದೆ ಕೋವಿಡ್ ಚಿಕಿತ್ಸೆ ನಡೆಸಲಾಗುತ್ತಿದ್ದ ಕಟ್ಟಡದಲ್ಲಿಒ.ಪಿ. ಆರಂಭಿಸಲಾಗುವುದು. ವೈದ್ಯರ, ಸಿಬ್ಬಂದಿಯ ಸಹಿತ ಜನರಲ್ ಒ.ಪಿ. ಶೀಘ್ರದಲ್ಲೇ ಆರಂಭಿಸಲು ಸಾಧ್ಯ ಎಂದವರು ನುಡಿದರು.
ಚಟುವಟಿಕೆಗಳ ಅವಲೋಕನ
ಆರೋಗ್ಯ ಸಚಿವೆಯಾದ ನಂತರ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ವೀಣಾ ಜಾರ್ಜ್ ಅವರು ಉಕ್ಕಿನಡ್ಕದ ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿನ ಚಟುವಟಿಕೆಗಳ ಅವಲೋಖನ ನಡೆಸಿದರು.
ಶಾಸಕರಾದ ಎನ್.ಎ.ನೆಲ್ಲಿಕುನ್ನು, ಸಿ,ಎಚ್.ಕುಂಞಂಬು, ಆರೋಗ್ಯ ಇಲಾಖೆಯ ಅಡೀಷನಲ್ ಪ್ರಧಾನ ಕಾರ್ಯದರ್ಶಿ ಡಾ.ಆಶಾ ಥಾಮಸ್, ಜತೆ ಕಾರ್ಯದರ್ಶಿ ಶ್ರೀರಾಂ ವೆಂಕಟರಾಮನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ಮೆಡಿಕಲ್ ಶಿಕ್ಷಣ ಜತೆ ನಿರ್ದೇಶಕ ಡಾ.ಥಾಮಸ್ ಮಾಥ್ಯೂ, ನೋಡೆಲ್ ಅಧಿಕಾರಿ ಡಾ.ಆದರ್ಶ್ ಎಂ.ಬಿ., ಕಾಸರಗೊಡು ಅಭೀವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಆರೋಗ್ಯ ಇಲಾಖೆಯ ಇತರ ಸಿಬ್ಬಂದಿ ಜತೆಗಿದ್ದರು.