ಪೆರ್ಲ :ಎಣ್ಮಕಜೆ ಗ್ರಾಮ ಪಂಚಾಯತು ವತಿಯಿಂದ ಕುಟುಂಬಶ್ರೀ ಸಿಡಿಎಸ್ ಮಟ್ಟದ ಬಾಲ ಸಭಾ ಕಾರ್ಯಕ್ರಮ ಪಂಚಾಯತು ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಎಣ್ಮಕಜೆ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಸಂಘಟನಾತ್ಮ ಶಕ್ತಿ ಹಾಗೂ ನಾಯಕತ್ವದ ಗುಣ ಬೆಳೆಸುವಲ್ಲಿ ಬಾಲಸಭೆಯ ಪಾತ್ರ ಮಹತ್ತರವಾದುದು. ಕೋರೋನ ಮಹಾಮಾರಿ ನಿಮಿತ್ತ ಮನೆಯೊಳಗೆ ಉಳಿದು ಮನದ ಕೀಳರಿಮೆ ಮೂಡಿಸಿಕೊಂಡ ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಸಿಕೊಳ್ಳಲು ಬಾಲ ಸಭೆಯ ಕಾರ್ಯ ಚಟುವಟಿಕೆಗಳು ಶ್ಲಾಘನೀಯ ಎಂದರು. ಸಿಡಿಎಸ್ ಚೆಯರ್ ಪರ್ಸನ್ ಶಾರದ ಸಭೆಯ ಅಧ್ಯಕ್ಷತೆವಹಿಸಿದ್ದರು. ಪಂ.ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್,ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್.ಗಾಂಭೀರ್,ಸೌಧಾಬಿ ಹನೀಫ್, ಪಂ.ಸದಸ್ಯರಾದ ರಾಧಾಕೃಷ್ಣ ನಾಯಕ್ ಶೇಣಿ, ರಾಮಚಂದ್ರ ಎಂ, ರಮ್ಲ,ಉಷಾ ಗಣೇಶ್, ಸಿಡಿಎಸ್ ಸದಸ್ಯೆಯರು,ಬಾಲಸಭಾ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾನಿಧ್ಯ ಕುಲಾಲ್ ಸ್ವಾಗತಿಸಿ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.