ನವದೆಹಲಿ: ಕೋವಿಡ್-19 ಲಸಿಕೆ ಪಡೆದ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಲು ಎರಡೂ ಡೋಸ್‌ಗಳನ್ನು ಪಡೆದ ಪ್ರತಿ ಕುಟುಂಬಗಳ ಮನೆಗೆ ಸ್ಟಿಕ್ಕರ್‌ಗಳನ್ನು ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಅವರು ಮಂಗಳವಾರ ಹೇಳಿದ್ದಾರೆ.
ನವದೆಹಲಿ: ಕೋವಿಡ್-19 ಲಸಿಕೆ ಪಡೆದ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಲು ಎರಡೂ ಡೋಸ್‌ಗಳನ್ನು ಪಡೆದ ಪ್ರತಿ ಕುಟುಂಬಗಳ ಮನೆಗೆ ಸ್ಟಿಕ್ಕರ್‌ಗಳನ್ನು ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಅವರು ಮಂಗಳವಾರ ಹೇಳಿದ್ದಾರೆ.
ಲಸಿಕೆ ಪಡೆದ ಬಗ್ಗೆ ಪ್ರತಿ ಕುಟುಂಬದ ಮಾಹಿತಿ ಸಂಗ್ರಹಿಸುವ ಹಾಗೂ ಲಸಿಕೆ ಅಭಿಯಾನವನ್ನು ದೇಶದಾದ್ಯಂತ ಕೈಗೊಳ್ಳಲು ಸರ್ಕಾರೇತರ ಸಂಸ್ಥೆಗಳು, ಸಮಾಜದ ವಿವಿಧ ಸಂಘಟನೆಗಳ ಜತೆಗೆ ಮಂಗಳವಾರ ನಡೆದ ಸಭೆಯಲ್ಲಿ ಸಚಿವರು ಈ ಸಲಹೆ ನೀಡಿದ್ದಾರೆ.
ಭಾರತದಂತಹ ದೇಶದಲ್ಲಿ ಲಸಿಕೆ ಕಾರ್ಯಕ್ರಮದಂತಹ ಬೃಹತ್ ಅಭಿಯಾನದಲ್ಲಿ ಜನರ ಭಾಗವಹಿಸುವಿಕೆ ಅತ್ಯಗತ್ಯ ಎಂದು ಹೇಳಿರುವ ಅವರು, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಸರ್ಕಾರದ ಜತೆಗೆ ಕೈಜೋಡಿಸಿದ ಸರ್ಕಾರೇತರ ಸಂಸ್ಥೆಗಳು ಮತ್ತು ಸಾಮಾಜಿಕ ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.