ನವದೆಹಲಿ: ಹೋಟೆಲ್ ಆಸ್ತಿಯನ್ನು ಎನ್‌ಪಿಎ ಎಂದು ಘೋಷಿಸಿ, ಕಡಿಮೆ ಬೆಲೆಗೆ ಮಾರಾಟ ಮಾಡಿದ ಪ್ರಕರಣದಲ್ಲಿ ಎಸ್‌ಬಿಐ ಮಾಜಿ ಅಧ್ಯಕ್ಷ ಪ್ರತಿಪ್ ಚೌಧರಿಯನ್ನು ದೆಹಲಿಯ ಜೈಸಲ್ಮೇರ್ ಪೊಲೀಸರು ಬಂಧಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಚೌಧರಿಯನ್ನು ಬಂಧಿಸುವಂತೆ ಆದೇಶ ನೀಡಿತ್ತು. ಇದರ ಆಧಾರದ ಮೇಲೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಪ್ ಚೌಧರಿಯನ್ನು ಭಾನುವಾರ ಬಂಧಿಸಲಾಗಿದ್ದು, ಸೋಮವಾರ ಜೈಸಲ್ಮೇರ್‌ಗೆ ಕರೆತರಲಾಗಿದೆ.
ಜೈಸಲ್ಮೇರ್‌ನ ಹೋಟೆಲ್ ಗ್ರೂಪ್ಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರತಿಪ್ ಚೌಧರಿಯನ್ನು ದೆಹಲಿಯ ಅವರ ನಿವಾಸದಲ್ಲಿ ಬಂಧಿಸಲಾಗಿದೆ. ಸುಮಾರು 200 ಕೋಟಿ ಮೌಲ್ಯದ ಆಸ್ತಿಯನ್ನು ಎನ್ ಪಿಎ ಎಂದು ಘೋಷಿಸಿ, 25 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.