ಈ ಕುರಿತು ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹಾಗೂ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್, "ಕೊರೊನಾ ನಿಯಂತ್ರಣಕ್ಕೆ ನಿಗಾವಹಿಸಲು ಸಿಎಂ ಸೂಚಿಸಿದ್ದು, ವಿದೇಶದಿಂದ ಬಂದ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸುತ್ತೇವೆ. ಆರ್‌ಟಿಪಿಸಿಆರ್ ಪರೀಕ್ಷೆಗಳೊಂದಿಗೆ ಎಲ್ಲಾ ಕಾಲೇಜು ಕ್ಯಾಂಪಸ್ ಮತ್ತು ಹಾಸ್ಟೆಲ್‌ಗಳ ಸ್ಕ್ರೀನಿಂಗ್ ಮತ್ತು ವೈದ್ಯಕೀಯ ಮತ್ತು ಅರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿಶೇಷ ಒತ್ತು ನೀಡಲಾಗುವುದು" ಎಂದರು.
ದಕ್ಷಿಣ ಆಫ್ರಿಕಾ- ಹಾಂಗ್ ಕಾಂಗ್ ಸೇರಿದಂತೆ ಹೈರಿಸ್ಕ್ ದೇಶಗಳ ಮೇಲೆ ನಿಗಾ ಇಡಲಾಗಿದ್ದು, ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲು ಸಿಎಂ ಸೂಚಿಸಿದ್ದು, ಎರಡು ಡೋಸ್ ವ್ಯಾಕ್ಸಿನ್ ಶೀಘ್ರ ಪೂರೈಸಲು ಹೇಳಿದ್ದಾರೆ" ಎಂದಿದ್ದಾರೆ.
ಮತ್ತೆ ಗಡಿ ನಿಗಾ ಸಾಧ್ಯತೆ:
ಚೆಕ್ ಪೋಸ್ಟ್‌ಗಳನ್ನು ಸಕ್ರಿಯಗೊಳಿಸುವ ಮೂಲಕ ಗಡಿ ಪ್ರದೇಶದಲ್ಲಿ ಕಟ್ಟುನಿಟ್ಟಾದ ಕ್ರಮ ಜಾರಿಗೊಳಿಸಲಾಗುವುದು. ಕೇರಳದ ಮತ್ತು ಇತರ ರಾಜ್ಯ ಹಾಗೂ ದೇಶಗಳಿಂದ ಬರುವವರ ಬಗ್ಗೆ ಹೆಚ್ಚಿನ ನಿಗಾ ಇರಿಸಲಾಗುವುದು" ಎಂದು ಡಿಸಿಗಳು ತಿಳಿಸಿದ್ದಾರೆ.
"ಮಾಸ್ಕ್, ಸಾಮಾಜಿಕ, ಅಂತರ ಕೈ ಸ್ವಚ್ಛತೆ ನಾಗರಿಕರು ಪಾಲಿಸಬೇಕು. ಜಿಲ್ಲೆಯ ಜನ ಶೀಘ್ರ ವ್ಯಾಕ್ಸಿನೇಷನ್ ಮಾಡಿಸಿಕೊಂಡು ಸರಕಾರದ ನಿಯಮಾವಳಿಯನ್ನು ಕಡ್ಡಾಯ ಪಾಲಿಸಬೇಕು" ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಮಧ್ಯೆ ಹಳೇ ಚಾಳಿ:
ಅತ್ತ ಹೊಸ ವ್ಯೆರಸ್ ಬಗ್ಗೆ ಸರ್ಕಾರ ಹೇಳ ಹೊರಟಿರುವಂತೆ ಇತ್ತ ಕರ್ನಾಟಕ ಸರ್ಕಾರ ತುಸು ಹೆಚ್ಚೇ ಕಾಳಜಿ ವಹಿಸತೊಡಗಿದ್ದು, ಗಲಿಬಿಲಿಗೊಳಗಾದಂತೆ ಕಂಡುಬಂದಿದೆ. ಜೊತೆಗೆ ದಕ್ಷಿಣ ಕನ್ನಡ ಸಹಿತ ಅಂತರ್ ರಾಜ್ಯ ಗಡಿಗಳಲ್ಲಿ ನಿಗಾ ವಹಿಸಲು ದರ್ದು ತೋರ್ಪಡಿಸಿದೆ.
ತಲಪಾಡಿಯಲ್ಲಿ ಹೇಗೆ?:
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ತಲಪಾಡಿ ಗಡಿಯಲ್ಲಿ ಕೇರಳದ ಕಡೆಯಿಂದ ಆಗಮಿಸುವ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದ್ದರೂ, ಕೋವಿಡ್ RTPCR ವರದಿ ಕಡ್ಡಾಯಗೊಳಿಸಲಾಗಿದೆ. ಇಂದು ಬೆಳಗ್ಗಿನಿಂದಲೇ ಜಾರಿಗೆ ಬಂದಿದೆ. ಹಠಾತ್ ನಿರ್ಧಾರದಿಂದ ಇಂದು ಬೆಳಿಗ್ಗೆ ಈ ಬಗ್ಗೆ ಅರಿವಿರದ ಅನೇಕರು ತಲಪಾಡಿಯಿಂದಲೇ ಮತ್ತೆ ಹಿಂದೆ ಬರುವಂತಾಗಿದೆ. ಕೆಎಸ್ ಆರ್ ಟಿ ಸಿ ಸೇವೆ ಸಾಮಾನ್ಯವಾಗಿದ್ದರೂ,ಪ್ರಯಾಣಿಕರನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ಕಳೆದ ಎಂಟು ದಿನಗಳ ಹಿಂದೆಯಷ್ಟೇ ಅಂತರ್ ರಾಜ್ಯ ಸಾಮಾನ್ಯ ಸಂಚಾರ ಆರಂಭಗೊಂಡಿದ್ದು, ಅಲ್ಪಾವಧಿಯಲ್ಲೇ ಮತ್ತೆ ಗಡಿ ನಿಯಂತ್ರಣ ಭೀತಿ ಕಾಸರಗೋಡಿಗರಿಗೆ ಎದುರಾಗಿದೆ.