ಬೆಂಗಳೂರು: ಅಭಿಮಾನಿಗಳ ಕಣ್ಣಲ್ಲಿ ತಟಸ್ಥವಾಗಿ ಉಳಿದು ಕುಟುಂಬದವರ ಮನದಲ್ಲಿ ಆರದ ನಂದಾದೀಪದಂತೆ ಪ್ರಜ್ವಲಿಸುತ್ತಿರುವ ಕನ್ನಡ ಚಿತ್ರರಂಗದ ಯುವರತ್ನ ದಿ.ನಟ ಪುನೀತ್ ರಾಜ್‌ಕುಮಾರ್ ಎಂದಿಗೂ ಆರದ ಸ್ಮರಣಜ್ಯೋತಿ ಈ ಸ್ಮರಣಜ್ಯೋತಿಯ ಬದುಕನ್ನು ತೆರೆಮೇಲೆ ತರುವ ಪ್ರಯತ್ನವೊಂದು ನಡೆಯುತ್ತದೆ.
ಯುವರತ್ನ ಸೇರಿದಂತೆ ಅಪ್ಪು ನಟನೆಯಲ್ಲಿ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಒಳ್ಳೆಯ ಚಿತ್ರಗಳನ್ನು ನೀಡಿದ್ದಾರೆ.ಅಲ್ಲದೇ ಆನಂದ್ ರಾಮ್ ಅಪ್ಪು ಅಭಿಮಾನಿ ಸಹ. ಪುನೀತ್ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ ಸಂತೋಷ್ ಆನಂದ್ ರಾಮ್, ನಿಮಲ್ಲಿ ಇದ್ದಂತ ನಿಷ್ಕಲ್ಮಶ ಮನಸು ಮಗುವಿನಷ್ಟೆ ಚಂದದ ಅಹಂ ಇಲ್ಲದ ನಗು ಎಲ್ಲಿಯೂ ಸಿಗದಂತದ್ದು ನಿಮ್ಮನ್ನು ಇಷ್ಟಪಡುತಿದ್ದ ಪ್ರತಿ ಮಕ್ಕಳಲ್ಲೂ ನೀವಿದ್ದಿರ. ನಾನು ನೀವಿಲ್ಲ ಎಂದು ಬಾವಿಸುವುದಿಲ್ಲ ನಿಮಗೆ ಸಂಬಂಧ ಪಟ್ಟ ಪ್ರತಿ ಪೋಸ್ಟ್ ನಲ್ಲೂ ನಿಮ್ಮನ್ನು ಟ್ಯಾಗ್ ಮಾಡ್ತೀನಿ. ನೀವು ನನಗೆ ಸದಾ ಜೀವಂತ ಅಂತ ಸಂತೋಷ್ ಆನಂದ್ ರಾಮ್ ಬರೆದುಕೊಂಡಿದ್ದರು.
ಹೀಗೆ ಅಪ್ಪು ಬಗ್ಗೆ ಸಂತೋಷ್ ಆನಂದ್‌ರಾಮ್‌ಗೆ ಇರೋ ಅಭಿಮಾನವನ್ನು ಕಂಡಂತಹ ಅಪ್ಪು ಅಭಿಮಾನಿಗಳು ಪುನೀತ್‌ಗಾಗಿ ಹಾಡು ನಿರ್ಮಿಸಿ ಚಿತ್ರ ನಿರ್ಮಿಸಿ ಅಪ್ಪು ಬಯೋಪಿಕ್ ನಿರ್ಮಿಸಿ ಅಂತ ಟ್ವೀಟ್ ಮೂಲಕ ಮನವಿ ಮಾಡಿದ್ದರು. ಹೀಗೆ ಅಪ್ಪು ಬಯೋಪಿಕ್ ನಿರ್ಮಿಸುವಂತೆ ಮನವಿ ಮಾಡಿರೋ ಅಭಿಮಾನಿಗೊಬ್ಬನಿಗೆ ಪ್ರತಿಕ್ರಿಯಿಸಿರೋ ಸಂತೋಷ್ ಆನಂದ್ ರಾಮ್, ಅಪ್ಪುಬಯೋಪಿಕ್ ನಿರ್ಮಿಸೋ ಬಗ್ಗೆ ಚಿಂತನೆಯಿರೋದಾಗಿ ಹೇಳಿದ್ದಾರೆ.
ಅಷ್ಟೇ ಅಲ್ಲದೇ ಅಪ್ಪು ಅಭಿಮಾನಿ ಅಪ್ಪು ಸರ್ ಗೋಸ್ಕರ ಪ್ರತಿ ವರ್ಷ ಒಂದು ಹಾಡು ಮಾಡಿ! ಅದೇ ನಮ್ಮೆಲ್ಲರ Anthem ಆಗಿ ಇರುತ್ತದೆ ಎಂದು ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊಬ್ಬ ಅಭಿಮಾನಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಒಂದು ಮನವಿಯನ್ನು ಮಾಡಿಕೊಂಡಿದ್ದರು. ಅಪ್ಪು ಸರ್ ಗೋಸ್ಕರ ಪ್ರತಿ ವರ್ಷ ಒಂದು ಹಾಡು ಮಾಡಿ ಎಂದು ಟ್ವೀಟರ್ನಲ್ಲಿ ಕೇಳಿಕೊಂಡಿದ್ದರು. ಅಭಿಮಾನಿಯ ಟ್ವೀಟ್ಗೆ ಸಾವಿರ ಪೆರ್ಸಂಟ್ ಅಂತ ಕೈ ಮುಗಿದು ಸಂತೋಷ್ ಆನಂದ್ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ.