ಕಾಸರಗೋಡು: ಸರ್ಕಾರದ ಹೊಸ ಮದ್ಯ ನೀತಿಯನ್ನು ಪ್ರತಿಭಟಿಸಿ ಮಾದಕದ್ರವ್ಯ ನಿರ್ಮೂಲನಾ ಹೋರಾಟ ಸಮಿತಿ ವತಿಯಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಪ್ರತಿಭಟನೆ ನಡೆಯಿತು. ಸಮಾಜಸೇವಕ ಎ.ಎಂ ಕಡವತ್ ಪ್ರತಿಭಟನೆಗೆ ಚಾಲನೆ ನೀಡಿದರು.
ಹೊಸ ಮದ್ಯನೀತಿಯನ್ವಯ ಪ್ರವಾಸಿಕೇಂದ್ರಗಳಲ್ಲಿ ಶೇಂದಿ ಮಾರಾಟದ ಅಂಗಡಿಗಳನ್ನು ತೆರೆಯುವ ತೀರ್ಮಾನವನ್ನು ಹಿಂತೆಗೆಯುವಂತೆ ಆಗ್ರಹಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಮೂಸಾನ್ ಪಾಡಿಲ್ಲತ್ ಅಧ್ಯಕ್ಷತೆ ವಹಿಸಿದ್ದರು. ಶಿವಗಿರಿ ಮಠದ ಸ್ವಾಮಿ ಪ್ರೇಮಾನಂದ, ಜೋಸ್ ಮಾವೇಲಿ, ಹಾದಿ ತಙಳ್, ಶಾಫಿ ಕಲ್ಲುವಳಪ್ಪ್, ಸಿ.ಎಚ್. ಮಹಮ್ಮದ್ ಕುಞÂ, ಮೂಸಾ ಮೊಗ್ರಾಲ್ ಉಪಸ್ಥಿತರಿದ್ದರು. ಡಾ. ಪಿ.ಆರ್. ಸುರೇಂದ್ರನಾಥ್ ಸ್ವಾಗತಿಸಿದರು. ಹಮೀದ್ ಚೇರಂಗೈ ವಂದಿಸಿದರು.