ಮಂಜೇಶ್ವರ: ತುಳುವೆರೆ ಆಯನೊ ಕೂಟ, ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ಇದರ ನೇತೃತ್ವದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ತುಳುನಾಡಿನ ಸಂಸ್ಕøತಿ ಸಂಸ್ಕಾರವನ್ನು ಇಂದಿನ ತಾಂತ್ರಿಕ ಯುಗದಲ್ಲಿ ಕಾಯ್ದುಕೊಳ್ಳಲು ರೂಪಿಸಿದ ತುಳುನಾಡ ಬಾಲೆ ಬಂಗಾರ್ 2021 ಮುದ್ದು ಮಕ್ಕಳ ಪೋಟೋ ಸ್ಪರ್ಧೆಯ ವಿಜೇತ ಮಕ್ಕಳ ಘೋಷಣೆ ಹಾಗೂ ಬಹುಮಾನ ವಿತರಣೆ ಹೊಸಂಗಡಿಯ ಗೇಟ್ ವೇ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಸಂಹಿತ್ ಚೇತನ ನಗರ ಕುಂಪಲ(ಪ್ರಥಮ), ಇಹಾ ಎನ್. ನಡುಮನೆ ಇಡಿಯಡ್ಕ ಮನೆ ನೆಲ್ಯಾಡಿ ಕಡಬ(ದ್ವಿತೀಯ), ರಿಧಿ ಕಿಶೋರ್ ಅಮೀನ್ ಹೊಸಬೆಟ್ಟು ಕುಳಾಯಿ ಮಂಗಳೂರು(ತೃತೀಯ), ಸ್ಕಂದ ವೈ ಪೂಜಾರಿ ಐಕಳಕಟ್ಟೆ ಮಡಿಲೊಟ್ಟು ಕಿನ್ನಿಗೋಳಿ(ಚತುರ್ಥ), ವಿಭ ಎನ್ ನೆಟ್ಟ ಗೋಳ್ತಮಜಲು ಕಲ್ಲಡ್ಕ(ಪಂಚಮ) ಬಹುಮಾನಗಳನ್ನು ಪಡೆದಿರುವರು. ಗಣ್ಯರು ಬಹುಮಾನಗಳನ್ನು ವಿತರಿಸಿದರು.