ಕಾಸರಗೋಡು: ಹೇರೂರು ಮೀಪ್ರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೈಯರ್ ಸೆಕೆಂಡರಿ ವಿಭಾಗದ ಹೆಣ್ಣುಮಕ್ಕಳಿಗಾಗಿ ಷೀ ಕ್ಯಾಂಪ್ ಎಂಬ ಹೆಸರಿನ ಏಕದಿನ ಶಿಬಿರ ಜರುಗಿತು. ಸಮಾಜದಲ್ಲಿ ಆತ್ಮವಿಶ್ವಾಸ, ಸಾಮಾಜಿಕ ಸುರಕ್ಷೆ, ದೈಹಿಕ ಶುಚಿತ್ವ ಎಂಬ ವಿಷಯಗಳೊಂದಿಗೆ ಶಿಬಿರ ನಡೆಯಿತು. ಮಂಗಲ್ಪಾಡಿ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪಿ.ಕೆ.ರಶ್ಮಿ ನೇತೃತ್ವ ವಹಿಸಿದ್ದರು. ಕೆರಿಯರ್ ಮಾಸ್ಟರ್ ಶಾಂ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಆಯಿಷತ್ ಬುಹರಾ ವಂದಿಸಿದರು.