ಇಸ್ಲಾಮಾಬಾದ್: ಮಾನವೀಯ ನೆರವಿನ ಆಧಾರದಲ್ಲಿ ಭಾರತ ಅಫ್ಘಾನಿಸ್ತಾನಕ್ಕೆ ನೀಡಲಿರುವ ಗೋದಿಯನ್ನು ಸಾಗಿಸಲು ತನ್ನ ದೇಶದ ಮಾರ್ಗವನ್ನು ಉಪಯೋಗಿಸಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅನುಮತಿ ನೀಡಿದ್ದಾರೆ.
ಇದುವರೆಗೂ ಪಾಕ್ ಮೂಲಕ ಯಾವುದೇ ವಸ್ತುವನ್ನು ಸಾಗಿಸಲು ಅಫ್ಘಾನಿಸ್ತಾನಕ್ಕೆ ಮಾತ್ರವೇ ಪಾಕ್ ಅನುಮತಿ ನೀಡಿತ್ತು.
ಹೀಗಾಗಿ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಬೇಕಿದ್ದ ಎಲ್ಲಾ ವಸ್ತುಗಳು ಪಾಕ್ ದೇಶದೊಳಗಿನ ಮಾರ್ಗದಿಂದಲೇ ಸಾಗಣೆಯಾಗುತ್ತಿದ್ದವು. ಆದರೆ ಭಾರತದಿಂದ ಅಫ್ಘಾನಿಸ್ತಾನಕ್ಕೆ ಯಾವುದೇ ವಸ್ತುಗಳ ಸರಬರಾಜಿಗೆ ಪಾಕ್ ಅನುಮತಿ ನಿರಾಕರಿಸಿತ್ತು.
ಇದೇ ಮೊದಲ ಬಾರಿಗೆ ಭಾರತದಿಂದ- ಅಫ್ಘಾನಿಸ್ತಾನಕ್ಕೆ ತಲುಪಬೇಕಿರುವ ಗೋದಿಯನ್ನು ತನ್ನ ದೇಶದ ಮೂಲಕವಾಗಿ ಸಾಗಣೆಗೆ ಅನುಮತಿ ನೀಡಿದೆ. 50,000 ಮೆಟ್ರಿಕ್ ಟನ್ ಪ್ರಮಾಣದ ಗೋದಿಯನ್ನು ಭಾರತ ಮಾನವೀಯ ನೆರವಾಗಿ ಅಫ್ಘಾನಿಸ್ತಾನಕ್ಕೆ ನೀಡುತ್ತಿದೆ.