ಕುಂಬಳೆ: ಏಡ್ಸ್ ಜಾಗೃತಿಗಾಗಿ ಕುಂಬಳೆ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಲಿರುವ 'ಪಾಸಿಟಿವ್' ಕಿರುಚಿತ್ರದ ಚಿತ್ರೀಕರಣ ಕುಂಬಳೆ ಸುತ್ತಮುತ್ತಲ ಪ್ರದೇಶದಲ್ಲಿ ಆರಂಭವಾಗಿದೆ. ಕಾಸರಗೋಡು ಬ್ಲಾಕ್ ಪಂಚಾಯತಿ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಅವರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಿಚ್ ಆನ್ ಮಾಡುವ ಮೂಲಕ ಶನಿವಾರ ಚಾಲನೆ ನೀಡಿದರು.
ಬಹುತೇಕ ನಟರು ಕುಂಬಳೆ ಸಿಎಚ್‍ಸಿಯ ಉದ್ಯೋಗಿಗಳಾಗಿದ್ದಾರೆ. ಈ ಚಿತ್ರವು ಎಚ್.ಐ.ವಿ/ ಏಡ್ಸ್ ನಿಂದ ವಿಮುಕ್ತರಾಗಿ ಸುಲಲಿತ ಬದುಕನ್ನು ಸಾಕುವ ಕಥೆಯನ್ನು ಹೇಳುತ್ತದೆ. ಗೋಪಿ ಕುತ್ತಿಕೋಲು ಅವರು ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಕುಮಾರನ್ ಬಿ.ಸಿ.ಬರೆದಿದ್ದು, ಆರೋಗ್ಯ ಮೇಲ್ವಿಚಾರಕ ಬಿ. ಅಶ್ರಫ್ ಅವರ ಪರಿಕಲ್ಪನೆಯಲ್ಲಿ ಚಿತ್ರ ಮೂಡಿಬಂದಿದೆ.
ವೈದ್ಯಾಧಿಕಾರಿ ಡಾ. ಕೆ. ದಿವಾಕರ ರೈ, ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಕಿರಿಯ ಆರೋಗ್ಯ ನಿರೀಕ್ಷಕರಾದ ಕೆ.ಎಸ್.ರಾಜೇಶ್, ಸಿ.ಸಿ.ಬಾಲಚಂದ್ರನ್, ಹೆಡ್ ನರ್ಸ್ ಸುಧಾ, ಸ್ಟಾಫ್ ನರ್ಸ್ ಸಜಿತಾ, ಸೀನಿಯರ್ ಕ್ಲರ್ಕ್ ರವಿಕುಮಾರ್, ವಿಲ್ಫ್ರೆಡ್, ಮಸೂದ್ ಬೋವಿಕ್ಕಾನ, ಮೋಹಿನಿ, ಅಮಲರಾಜ್, ರಿಮ್ಸನ್ ರಾಸ್, ರಾಜೇಂದ್ರ ಮತ್ತು ನೆಪ್ಚೂನ್ ಚಿತ್ರದಲ್ಲಿ ಪಾತ್ರಗಳನ್ನು ನಿರ್ವಹಿಸುತ್ತಾರೆ. ಈ ಚಿತ್ರ ವಿಶ್ವ ಏಡ್ಸ್ ದಿನವಾದ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ.