ಅಲುವಾ: ಶಬರಿಮಲೆ ಯಾತ್ರಾರ್ಥಿಗಳಿಗೆ ನಿಲಕ್ಕ್ಕಲ್-ಪಂಪಾ ಸರಣಿ ಸೇವಾ ಪ್ರಯಾಣ ಸಂಕಷ್ಟಮಯವಾಗಿದೆ ಎಂದು ಯಾತ್ರಾರ್ಥಿಗಳು ಹೇಳಿದ್ದಾರೆ. ಹಣಕಾಸಿನ ಶೋಷಣೆಯ ಜೊತೆಗೆ, ಯಾತ್ರಾರ್ಥಿಗಳಿಂದ ಕೊರೋನಾ ಮಾನದಂಡಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಉದ್ಯೋಗಿಗಳಿಂದಲೇ ಅಸಮಾಧಾನ ಉಂಟಾಗಿದೆ.
ಪ್ಯಾಸೆಂಜರ್, ಎಸಿ ಮತ್ತು ನಾನ್ ಎಸಿ ಬಸ್‍ಗಳು ಸೇವೆಗೆ ಬಂದರೂ ಎಸಿ ಬಸ್‍ಗಳು ಹೆಚ್ಚು ಶುಲ್ಕ ವಿಧಿಸಿ ಸಂಚರಿಸುತ್ತಿವೆ ಎಂಬ ಆರೋಪವಿದೆ. ಹೆಚ್ಚಿನ ಯಾತ್ರಾರ್ಥಿಗಳನ್ನು ಬಸ್ ನೊಳಗೆ ಕೋವಿಡ್ ಮಾನದಮಡಗಳನ್ನು ಗಾಳಿಗೆ ತೂರಿ ತುಂಬಿಸಿ ಜನನಿಬಿಡ ಸಂಚಾರ ನಡೆಸುವ ಮೂಲಕ ಅತಿಯಾದ ಲಾಭದ ಗುರಿಯನ್ನು ಹೊಂದಿರುವ ಸರ್ಕಾರ ಕೊರೋನಾ ವಿಸ್ತರಣೆಗೆ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂಬ ದೂರುಗಳು ಎದ್ದಿವೆ.
ಎಸಿ ದರ 18 ಕಿ.ಮೀಗೆ 80 ರೂ. ಒಂದೇ ಟ್ರಿಪ್‍ನಲ್ಲಿ ನೂರಾರು ಪ್ರಯಾಣಿಕರು ತುಂಬಿ ತುಳುಕುತ್ತಿದ್ದು, ಹಣ ಗಳಿಕೆಯೊಂದೇ ಲಕ್ಷ್ಯವೆಂಬುದು ಸಾಬೀತಾಗಿದೆ. ಎಸಿ ಹೊರತುಪಡಿಸಿ ಇತರೆ ಬಸ್ ಗಳನ್ನು ನಿಯಮಿತವಾಗಿ ಮಾತ್ರ ಸಂಚರಿಸಲು ಸೂಚಿಸುತ್ತಿರುವುದರಿಂದ ನೌಕರರಿಗೆ ಕರ್ತವ್ಯ ಸಿಗದ ಸ್ಥಿತಿಯೂ ಇದೆ.