ಕಾಸರಗೋಡು: ವಿವಿಧ ಪ್ರಕರಣಗಳ ಆರೋಪಿ, ಉಳಿಯತ್ತಡ್ಕ ಬಿಲಾಲ್ ನಗರ ನಿವಾಸಿ ಸಮಾದಾನಿ ಇ.ಕೆ.(28) ಎಂಬಾತನ ವಿರುದ್ಧ ಕಾಪ್ಪ ಕಾಯಿದೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ನೀಡಿದರು. ಮಾದಕ ಪದಾರ್ಥ ಮಾರಾಟ, ಕೊಲೆಯತ್ನ, ಅಪಹರಣ ಸಹಿತ ವಿವಿಧ ಪ್ರಕರಣಗಳು ಈತನ ವಿರುದ್ಧ ಕಾಸರಗೋಡು, ವಿದ್ಯಾನಗರ, ಬದಿಯಡ್ಕ, ಕುಂಬಳೆ ಪೆÇಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ವಿದ್ಯಾನಗರ ಠಾಣೆಯಲ್ಲಿದಾಖಲಾಗಿರುವ 20 ಕಿಲೋ ಗಾಂಜಾ ಸಹಿತ ಬಂಧಿತನಾದ ಪ್ರಕರಣದಲ್ಲಿ ಆರೋಪಿ ಕಳೆದ 6 ತಿಂಗಳಿಂದ ಕಣ್ಣೂರು ಕೇಂದ್ರೀಯ ಕಾರಾಗೃಹದಲ್ಲಿದ್ದಾರೆ. ಮಾದಕ ಪದಾರ್ಥ ಪ್ರಕರಣಗಳ ಸಹಿತ ಒಂದಕ್ಕಿಂತ ಅಧಿಕ ಕೇಸುಗಳಿರುವ ಎಲ್ಲ ಆರೋಪಿಗಳ ವಿರುದ್ಧ ಕಾಪ್ಪ ಕಾಯಿದೆ ಪ್ರಕಾರ ಕ್ರಮ ಕೈಗೊಳ್ಳಲು ವರದಿ ಸಲ್ಲಿಸಲಾಗುವುದು ಎಂದು ಕಾಸರಗೋಡು ಡಿ.ವೈ.ಎಸ್.ಪಿ. ಬಾಲಕೃಷ್ಣನ್ ನಾಯರ್ ತಿಳಿಸಿರುವರು.