ತಿರುವನಂತಪುರ: ಮಾಧ್ಯಮಗಳಿಂದ ದೂರ ಉಳಿಯುವುದಿಲ್ಲ ಎಂದು ಸ್ವಪ್ನಾ ಸುರೇಶ್ ಹೇಳಿದ್ದಾರೆ. ರಾಜತಾಂತ್ರಿಕ ಸಾಮಾನು ಸರಂಜಾಮು ಮೂಲಕ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಮಾಧ್ಯಮದವರಿಂದ ದೂರವಿದ್ದ ಸ್ವಪ್ನಾ ನಿನ್ನೆ ಮಾಧ್ಯಮದವರಿಗೆ ಎದುರಾದಾಗ ಪತ್ರಕರ್ತರಿಗೆ ಈ ಬಗ್ಗೆ ಉತ್ತರ ನೀಡಿ ಸಮಜಾಯಿಷಿ ನೀಡಿದರು. ತನ್ನ ತಾಯಿಯೊಂದಿಗೆ ತಿರುವನಂತಪುರಂನಲ್ಲಿ ಮಾಧ್ಯಮದವರನ್ನು ಭೇಟಿಯಾಗಲಿದ್ದು, ಎಲ್ಲಾ ಅನುಮಾನಗಳಿಗೆ ಉತ್ತರ ಸಿಗಲಿದೆ ಎಂದು ಸ್ವಪ್ನಾ ಹೇಳಿದ್ದಾರೆ.
ಸ್ವಪ್ನಾಳಿಗೆ ಹೇಳಿಕೊಳ್ಳಲು ಹಲವು ವಿಷಯಗಳಿವೆ ಎಂದು ಈ ಹಿಂದೆಯೇ ಸ್ವಪ್ನಾಳ ತಾಯಿ ಪ್ರಭಾ ಸುರೇ|ಶ್ ಹೇಳಿದ್ದರು. ಕಳೆದ ಶನಿವಾರ ಅಟ್ಟಕ್ಕುಳಂಗರ ಮಹಿಳಾ ಜೈಲಿನಿಂದ ಸ್ವಪ್ನಾ ಬಿಡುಗಡೆಯಾಗಿದ್ದರು. ಕಳೆದ ವರ್ಷ ಜುಲೈ 5 ರಂದು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ 30 ಕೆಜಿ ಚಿನ್ನವನ್ನು ವಶಪಡಿಸಿದ ತರುವಾಯ ಜುಲೈ 11 ರಂದು ಬೆಂಗಳೂರಿನಿಂದ ಸ್ವಪ್ನಾರನ್ನು ಬಂಧಿಸಲಾಗಿತ್ತು.
ಬಳಿಕ ಕಾಕ್ಕನಾಡು ಮತ್ತು ವಿಯೂರು ಜೈಲಿನಲ್ಲಿ ಕೈದಿಯಾಗಿ ಒಂದು ವರ್ಷದ ನಂತರ ಬಿಡುಗಡೆಗೊಳಿಸಲಾಯಿತು. ಆರು ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ರೂ 25 ಲಕ್ಷದ ಎರಡು ಬಾಂಡ್‍ಗಳನ್ನು ಖಾತರಿಪಡಿಸಲಾಗಿದೆ.