ಕುಂಬಳೆ: ವೆಲ್ಫೇರ್ ಪಾರ್ಟಿಯು ಕುಂಬಳೆ ಬದ್ರಿಯಾ ನಗರದಲ್ಲಿ ಜನರ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗಿರುವ 12 ಮನೆಗಳ ಪೈಕಿ ಮೂರನೇ ಮನೆಯನ್ನು ('ವೆಲ್ಫೇರ್ ಹೋಮ್') ದಶಮಾನೋತ್ಸವದ ಕೊಡುಗೆಯಾಗಿ ಹಸ್ತಾಂತರಿಸಿದೆ.
ಜಿಲ್ಲಾಧ್ಯಕ್ಷ ಮಹಮ್ಮದ್ ವಡಕ್ಕೆಕ್ಕರ ಮನೆಯ ಕೀಲಿಕೈ ಹಸ್ತಾಂತರಿಸಿದರು. ಜಿಲ್ಲಾ ಕೋಶಾಧಿಕಾರಿ ಅಂಬುಂಞÂ್ಞ ತಳಕಳಾಯಿ, ಸ್ಥಳೀಯ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ಕುಂಬಳೆ, ಕಾರ್ಯದರ್ಶಿ ಹಮೀದ್ ಅಂಬಾರ್, ಕ್ಷೇತ್ರ ಸಮಿತಿ ಸದಸ್ಯ ನ್ಯಾಯವಾದಿ ಎಂ.ಸಿ.ಎಂ.ಅಕ್ಬರ್, ಮಹಿಳಾ ಚಳವಳಿ ಜಿಲ್ಲಾ ಸಮಿತಿ ಸದಸ್ಯೆ ಫೌಝಿಯಾ ಸಿದ್ದೀಕ್, ವೆಲ್ಫೇರ್ ಪಾರ್ಟಿ ಕುಂಬಳೆ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್, ಪಂಚಾಯಿತಿ ಸದಸ್ಯ ಬೀರನ್ ಯಾಸರ್, ಇಸ್ಮಾಯಿಲ್ ಮತ್ತಿತರರಿದ್ದರು.