ಮಂಜೇಶ್ವರ: ಪರಿಪೂರ್ಣ ವೆಲ್ಫೇರ್ ಫೌಂಡೇಶನ್ ಅಂಗಸಂಸ್ಥೆಯಾದ ಪರಿಪೂರ್ಣ ಮೇರಾ ಭಾರತ್ ಮಹಾನ್ ಮತ್ತು ಪರಿಪೂರ್ಣ ಯೂತ್ ಅಕಾಡೆಮಿ ಇದರ ವತಿಯಿಂದ 26/11 ರ ಮುಂಬೈ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಅವರ ಸಂಸ್ಮರಣಾ ಕಾರ್ಯಕ್ರಮ ಮಾಡ ಪರಿಸರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಕ್ರೇಶ್ ಅವರು ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರಿಶ್ಚಂದ್ರ ಮಂಜೇಶ್ವರ ಅವರು ಸಂಸ್ಮರಣಾ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದರು. ಮಂಜೇಶ್ವರ ಪಂಚಾಯತಿ 21 ನೇ ವಾರ್ಡಿನ ಸದಸ್ಯ ಲಕ್ಷ್ಮಣ್ ಕುಚ್ಚಿಕ್ಕಾಡ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪರಿಪೂರ್ಣ ಮೇರಾ ಭಾರತ್ ಮಹಾನ್ ಸದಸ್ಯರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.