ಉಪ್ಪಳ: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ, ವಿದೇಶದಲ್ಲಿ ನೆಲಸಿರುವ ವ್ಯಕ್ತಿಯ ವಿರುದ್ದ ರೆಡ್ ಕಾರ್ನರ್ ನೋಟ|ಈಸ್ ಜಾರಿಗೊಳಿಸಲಾಗಿದೆ.ಪೈವಳಿಕೆ ಕಯ್ಯಾರು ಸಮೀಪದ ಪರಂಬಳ ಕೊಳಂಜ ಹೌಸ್ ನ ಮುಹಮ್ಮದ್ ರಫೀಕ್ ಯಾನೆ ನಪ್ಪಟ ರಫೀಕ್ (32) ವಿರುದ್ದ ರೆಡ್ ಕಾರ್ನರ್ ಜಾರಿಗೊಳಿಸಲಾಗಿದೆ. ಕಾಸರಗೋಡು ಪೋಲೀಸರ ಅರ್ಜಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಕೊಲೆ, ಅಪಹರಣ, ಕಳವು, ದರೋಡೆ ಸಹಿತ ವಿವಿಧ ಪ್ರಕರಣಗಳಲ್ಲಿ ನಪ್ಪಟ ರಫೀಕ್ ಆರೋಪಿಯಾಗಿದ್ದಾನೆ. ಈತ ಭೂಗತ ಗೂಂಡ ರವಿ ಪೂಜಾರಿಯ ಸಹಾಯಕ ಯೂಸೆಫ್ ಸಿಯ ಎಂಬವನ ಅನುಚರನೆಂದು ಪೋಲೀಸರು ತಿಳಿಸಿದ್ದಾರೆ. ಈತನ ವಿರುದ್ದ ಕೇರಳ, ಕರ್ನಾಟಕ ಸಹಿತ ವಿವಿಧ ಪೋಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಈತನ ತಂಡದ ಪ್ರಮುಖನಾದ ಯೂಸೆಫ್ ಸಿಯನ್ನು ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.