ಕುಂಬಳೆ: ವಿಂಶತಿ ವರ್ಷಾಚರಣೆಯ ಅಂಗವಾಗಿ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ನೇತೃತ್ವದಲ್ಲಿ ಕನ್ನಡಾಂತರ್ಗತ ತುಳುನಾಡಿನ ಮಣ್ಣಿನ ಮಗ, ಹಿರಿಯ ಪತ್ರಕರ್ತ, ಕೇರಳ ರಾಜ್ಯೋದಯ ಪ್ರಶಸ್ತಿ ಪುರುಷ್ಕøತ, ಬಹುಭಾಷಾ ಸಾಹಿತಿ, ಸಾಮಾಜಿಕ - ಸಾಂಸ್ಕøತಿಕ - ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಪ್ರತಿಭಾನ್ವಿತ, ಮೇರು ವ್ಯಕ್ತಿತ್ವದ ಮಲಾರ್ ಜಯರಾಮ ರೈ ದಂಪತಿಗಳನ್ನು ಅವರ ಸ್ವಗೃಹ ಅಪ್ಪೆ ಇಲ್ಲ್‍ನಲ್ಲಿ ಗುರುನಮನ ಸಲ್ಲಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕ, ಪತ್ರಕರ್ತ ವಿಶಾಲಾಕ್ಷ ಪುತ್ರಕಳ ಅಧ್ಯಕ್ಷತೆ ವಹಿಸಿದರು. ಕುಂಬ್ಡಾಜೆ ಗ್ರಾಮ ಪಂಚಾಯತಿ ಸದಸ್ಯ ಹರೀಶ್ ಗೋಸಾಡ, ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪೆÇ್ರ.ಎ.ಶ್ರೀನಾಥ್ ಕಾಸರಗೋಡು, ನಾರಾಯಣ ನಾಯ್ಕ್ ಮೊದಲಾದವರು ಅಭಿನಂದನೆ ಸಲ್ಲಿಸಿ ಮಾತನಾಡಿದರು. ಕನ್ನಡ ಭವನದ ಸ್ಥಾಪಕ ವಾಮನ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿಗಳು ಮಲಾರ್ ಜಯರಾಮ ರೈ ದಂಪತಿಗಳಿಗೆ ಶಾಲು ಹೊದಿಸಿ, ಹಣ್ಣು ಹಂಪಲು, ಸ್ಮರಣಿಕೆ ನೀಡಿ ಗುರುನಮನ ಸಲ್ಲಿಸಿ ಗೌರವಿಸಿದರು. ಗುರುನಮಕ್ಕೆ ಪಾತ್ರರಾದ ಮಲಾರ್ ಜಯರಾಮ ರೈ ಅವರು ಮಾತನಾಡಿದರು.
ಹಿರಿಯ ರಂಗನಟ ವಾಸು ಬಾಯಾರು, ವಸಂತ ಕೆರೆಮನೆ, ಪತ್ರಕರ್ತರಾದ ಪ್ರದೀಪ್ ಬೇಕಲ್, ಜಗನ್ನಾಥ, ಅಖಿಲೇಶ್ ನಗುಮುಗಂ ಮೊದಲಾದವರು ಉಪಸ್ಥಿತರಿದ್ದರು. ಸಂಘಟಕ ಜಗದೀಶ್ ಕೂಡ್ಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಾಮನ್ ರಾವ್ ಬೇಕಲ್ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಪತ್ರಕರ್ತೆ ಸಾಯಿಭದ್ರ ರೈ ಕೃತಜ್ಞತೆ ಸಲ್ಲಿಸಿದರು.