ತಿರುವನಂತಪುರ: ನಿಸರ್ಗದ ಮೇಲೆ ಹಿಡಿತವಿಲ್ಲದೇ ಶೋಷಣೆಗೆ ಒಳಗಾದ ಅಭಿವೃದ್ಧಿ ಯೋಜನೆಗಳು ಯಾವುದೇ ಸಮಾಜಕ್ಕೆ ಹೊಂದುವುದಿಲ್ಲ ಎಂದು ಪ್ರೊ.ಮಾಧವ್ ಗಾಡ್ಗೀಳ್ ಹೇಳಿದರು.
ಕೇರಳ ಸುಸ್ಥಿರ ಅಭಿವೃದ್ಧಿ ಸಮಿತಿ ಮತ್ತು ರಾಷ್ಟ್ರೀಯ ಮಾಹಿತಿ ಹಕ್ಕು ಒಕ್ಕೂಟವು ‘ಎಕ್ಸ್‌ಪ್ರೆಸ್‌ವೇ ದುರಂತದ ಕಡೆಗೆ’ ಕುರಿತು ಆಯೋಜಿಸಿದ್ದ ಸಂವಾದವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಶ್ಚಿಮಘಟ್ಟದ ಅಪಾಯವನ್ನು ಗುರುತಿಸಬೇಕಿದೆ. ಅಭಿವೃದ್ಧಿಯ ಹೆಸರಿನಲ್ಲಿ ಸಂಪನ್ಮೂಲಗಳ ಅತಿಯಾದ ಶೋಷಣೆ ಅಪಾಯಕಾರಿ.
ಇಂದು ರಾಜ್ಯ ಎದುರಿಸುತ್ತಿರುವ ಅನೇಕ ಪ್ರಕೃತಿ ವಿಕೋಪಗಳಿಗೆ ಇದೇ ಕಾರಣ. ರಾಜ್ಯದಲ್ಲಿ ಶೇ.90ರಷ್ಟು ಕ್ವಾರಿಗಳು ಅಕ್ರಮವಾಗಿ ನಡೆಯುತ್ತಿವೆ. ಅವಕ್ಕೆ ಜಿಲ್ಲಾಡಳಿತ ಅಥವಾ ಸ್ಥಳೀಯಾಡಳಿತ ಸಂಸ್ಥೆಗಳ ಅನುಮತಿ ಇರುವುದಿಲ್ಲ.