ಪತ್ತನಂತಿಟ್ಟ: ಮಳೆಗಾಲದಿಂದ ಶಬರಿಮಲೆ ರಸ್ತೆಗಳಿಗೆ ಆಗಿರುವ ಹಾನಿಯನ್ನು ಅಂದಾಜಿಸಲು ಹಾಗೂ ಪುನರ್ ನಿರ್ಮಾಣದ ಪ್ರಗತಿ ಪರಿಶೀಲನೆಗೆ ಉನ್ನತ ಮಟ್ಟದ ತಂಡವನ್ನು ನೇಮಿಸಲಾಗಿದೆ. ಲೋಕೋಪಯೋಗಿ ಸಚಿವ ಪಿಎ ಮೊಹಮ್ಮದ್ ರಿಯಾಜ್ ಅಧ್ಯಕ್ಷತೆಯಲ್ಲಿ ನಡೆದ ಪಿಡಬ್ಲ್ಯುಡಿ ಮಿಷನ್ ತಂಡದ ಸಭೆಯಲ್ಲಿ ವಿಶೇಷ ತಂಡವನ್ನು ನೇಮಿಸಲಾಯಿತು.
ಲೋಕೋಪಯೋಗಿ ಇಲಾಖೆ ಜಂಟಿ ಕಾರ್ಯದರ್ಶಿ ಶ್ರೀರಾಮ ಸಾಂಬಶಿವರಾವ್ ಈ ತಂಡದ ನೇತೃತ್ವ ವಹಿಸಿದ್ದಾರೆ. ಮೂವರು ಮುಖ್ಯ ಇಂಜಿನಿಯರ್‍ಗಳನ್ನು ಒಳಗೊಂಡ ತಂಡವು ಪತ್ತನಂತಿಟ್ಟ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿನ ರಸ್ತೆಗಳ ಸ್ಥಿತಿಯನ್ನು ಸಹ ಮೌಲ್ಯಮಾಪನ ಮಾಡುತ್ತದೆ.
ಪರಿಶೀಲನೆಯ ನಂತರ ವಿಸ್ತೃತ ವರದಿ ಸಲ್ಲಿಸುವಂತೆ ಉನ್ನತ ಮಟ್ಟದ ತಂಡಕ್ಕೆ ಸಚಿವರು ಸೂಚಿಸಿದರು.
ಶಬರಿಮಲೆ ರಸ್ತೆ ನಿರ್ಮಾಣದ ಪರಿಶೀಲನೆಗೆ ಭಾನುವಾರ ಪತ್ತನಂತಿಟ್ಟದಲ್ಲಿ ಸಚಿವ ಪಿ.ಎ. ಮೊಹಮ್ಮದ್ ರಿಯಾಜ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ಕರೆಯಲು ನಿರ್ಧರಿಸಲಾಗಿದೆ. ಶಾಸಕರು, ಪತ್ತನಂತಿಟ್ಟ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.