ವಾಷಿಂಗ್ಟನ್: ಭಾರತದೊಂದಿಗೆ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‌ಎಸಿ) ತನ್ನ ಹಕ್ಕುಗಳನ್ನು ಒತ್ತಿಹೇಳಲು ಚೀನಾ "ಒತ್ತಡ ಮತ್ತು ಯುದ್ಧತಂತ್ರದ ಕ್ರಮಗಳನ್ನು" ಅನುಸರಿಸುತ್ತಿದೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಹಾಗೂ ನಂತರದ ಸಮಯದಲ್ಲಿ ಭಾರತದ ಜೊತೆಗಿನ ತನ್ನ ಸಂಬಂಧ ಗಾಢವಾಗದಂತೆ ತಡೆಯಲು ವಿಫಲವಾಗಿದೆ ಎಂದು ಚೀನಾದ ಮಿಲಿಟರಿ ಆಧುನೀಕರಣ ಕುರಿತ ಪ್ರಮುಖ ವರದಿಯಲ್ಲಿ ಅಮೆರಿಕ ಹೇಳಿದೆ.
ತೈವಾನ್ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾ ನಡುವಿನ ಉದ್ವಿಗ್ನತೆಯ ನಡುವೆ ಪೆಂಟಗನ್ ವರದಿ ಬಂದಿದೆ ಮತ್ತು ತೈವಾನ್ ಅನ್ನು ರಕ್ಷಿಸುವ ಸಾಮರ್ಥ್ಯ ಅಮೆರಿಕ ಸೇನೆಗೆ ಇದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದು ಎಂದು ಅಮೆರಿಕ ಸಶಸ್ತ್ರ ಪಡೆಗಳ ಮುಖ್ಯಸ್ಥ ಜಾಯಿಂಟ್ ಚೀಫ್ಸ್ ಚೇರ್ಮನ್ ಮಾರ್ಕ್ ಮಿಲೆ ಅವರು ಬುಧವಾರ ಹೇಳಿದ್ದಾರೆ.
"ಪಲ್ಸ್ ರಿಪಬ್ಲಿಕ್ ಆಫ್ ಚೀನಾ(ಪಿಆರ್ ಸಿ)ದ ಗಡಿ ಉದ್ವಿಗ್ನತೆಯನ್ನು ತಡೆಯಲು ಭಾರತ ಅಮೆರಿಕದೊಂದಿಗೆ ಹೆಚ್ಚು ನಿಕಟವಾಗಿದೆ. ಪಿಆರ್ ಸಿ ಅಧಿಕಾರಿಗಳು ಭಾರತ-ಚೀನಾ ಸಂಬಂಧದಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ" ಎಂದು ರಕ್ಷಣಾ ಇಲಾಖೆಯು ಅಮೆರಿಕ ಕಾಂಗ್ರೆಸ್ ಗೆ ತಿಳಿಸಿದೆ.
ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ಮಿಲಿಟರಿ ಬಿಕ್ಕಟ್ಟಿನ ಕುರಿತು ಪೆಂಟಗಾನ್ ನಿಯಮಿತವಾಗಿ ಅಮೆರಿಕ ಕಾಂಗ್ರೆಸ್‌ಗೆ ವರದಿ ಮಾಡುತ್ತದೆ.
ಚೀನಾ ತನ್ನ ನೆರೆಹೊರೆಯವರೊಂದಿಗೆ ವಿಶೇಷವಾಗಿ ಭಾರತದೊಂದಿಗೆ ಆಕ್ರಮಣಕಾರಿ ಮತ್ತು ಬಲವಂತದ ವರ್ತನೆಯಲ್ಲಿ ತೊಡಗಿಸಿಕೊಂಡಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಸ್ಪಷ್ಟವಾಗಿ ಹೇಳಿದೆ.