ಕೋಲ್ಕತಾ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೋಲ್ಕತಾದ ಶಾಖೆಯೊಂದರಲ್ಲಿ ಗ್ರಾಹಕನೊಬ್ಬ ಷಾರ್ಟ್ಸ್ ಧರಿಸಿ ಬಂದ ಎನ್ನುವ ಕಾರಣಕ್ಕೆ ಅಲ್ಲಿಯ ಸಿಬ್ಬಂದಿ ಒಳಕ್ಕೆ ಬಿಡದ ಘಟನೆ ನಡೆದಿದ್ದು, ಇದೀಗ ಸಾಮಾಜಿಕ ಜಾಲಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅವರು ಈ ಟ್ವಿಟರ್ ಅನ್ನು ಎಸ್‌ಬಿಐಗೆ ಟ್ಯಾಗ್ ಮಾಡಿ ಈ ಪ್ರಶ್ನೆಯನ್ನು ಮುಂದಿಟ್ಟಿದ್ದರು. ಅದಕ್ಕೆ ಸ್ಪಂದಿಸಿದ ಎಸ್‌ಬಿಐ ಅದಕ್ಕೆ ಪ್ರತಿಕ್ರಿಯೆ ನೀಡಿದ್ದು, 'ನಿಮ್ಮ ಮಾತುಗಳನ್ನು ನಾವು ಗೌರವಿಸುತ್ತೇವೆ. ನಮ್ಮ ಗ್ರಾಹಕರಿಗೆ ಯಾವುದೇ ವಸ್ತ್ರ ಸಂಹಿತೆಯನ್ನೂ ನಾವು ಜಾರಿ ಮಾಡಿಲ್ಲ. ಅದರ ಬಗ್ಗೆ ಯಾವುದೇ ಅಧಿಕೃತ ನೀತಿ ಪ್ರಕಟಣೆಯನ್ನೂ ನಾವು ಮಾಡಿಲ್ಲ. ಅವರವರ ಆಯ್ಕೆಗೆ ತಕ್ಕಂತೆ, ಸ್ಥಳೀಯವಾಗಿ ಇರುವ ಕೆಲವು ನಿಯಮಗಳ ಅನುಸಾರ ಬಟ್ಟೆ ಧರಿಸಬಹುದು. ದಯವಿಟ್ಟು, ನಮ್ಮ ಬ್ಯಾಂಕ್ನ ಯಾವ ಶಾಖೆಯಲ್ಲಿ ಹೀಗಾಯಿತು? ಅದರ ಕೋಡ್ ಕೊಡಿ. ನಾವು ವಿಚಾರಿಸುತ್ತೇವೆ' ಎಂದು ಹೇಳಿದೆ.
ಆದರೆ ಇದನ್ನು ಮುಂದುವರೆಸಲು ಇಚ್ಛಿಸದ ಆಶೀಶ್ ಅವರು '2017ರಲ್ಲಿ ಕೂಡ ಪುಣೆಯಲ್ಲಿ ಬರ್ಮೂಡಾ ಧರಿಸಿಬಂದ ವ್ಯಕ್ತಿಯೊಬ್ಬರಿಗೆ ಇದೇ ರೀತಿಯಾಗಿತ್ತು. ಅದಕ್ಕಾಗಿ ವಸ್ತ್ರಸಂಹಿತೆ ಇದೆಯೇ ಎಂದು ಪ್ರಶ್ನಿಸಿದ್ದೆ. ಅದು ಇಲ್ಲ ಎಂಬ ಉತ್ತರ ಸಿಕ್ಕಿದೆ. ಈ ವಿಷಯವನ್ನು ನಾನು ಮುಂದುವರಿಸಲು ಇಷ್ಟಪಡುವುದಿಲ್ಲ. ಇಲ್ಲಿಗೇ ಮುಗಿಸುತ್ತೇನೆ' ಎಂದಿದ್ದಾರೆ.
ಆದರೆ ಈ ಟ್ವೀಟ್ ಜಾಲತಾಣದಲ್ಲಿ ಭಾರಿಚರ್ಚೆಗೆ ಗ್ರಾಸವಾಗಿದೆ. ಕೆಲವರು ತಮಾಷೆ ಎನಿಸುವ ಕಮೆಂಟ್‌ಗಳನ್ನೂ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬಟ್ಟೆ ಧರಿಸಿಬನ್ನಿ, ಅದು ಏನಾದರೂ ಓಕೆ, ಹಾಗೆಯೇ ಬರಬೇಡಿ ಎಂದು ಹಲವರು ತಮಾಷೆಯ ಕಮೆಂಟ್ ಮಾಡಿದ್ದಾರೆ.