ವಿಶಾಖಪಟ್ಟಣ: ತಿರುಮಲ ತಿರುಪತಿ ದೇವಸ್ಥಾನಮ್ ನ ಪ್ರಧಾನ ಅರ್ಚಕರಾಗಿದ್ದ ಡಾಲರ್ ಶೇಷಾದ್ರಿ ನಿಧನರಾಗಿದ್ದಾರೆ.
ಡಾಲರ್ ಶೇಷಾದ್ರಿ ಅವರಿಗೆ ಹೃದಯಾಘಾತ ಉಂಟಾಗಿತ್ತು. ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಿದ್ದ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. 1978 ರಿಂದಲೂ ಡಾಲರ್ ಶೇಷಾದ್ರಿ ಅವರು ದೇವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2007 ರಲ್ಲಿ ನಿವೃತ್ತರಾಗಿದ್ದರು. ನಂತರ ಒಎಸ್ ಡಿ ಆಗಿ ಮುಂದುವರೆದಿದ್ದರು.
ಟಿಟಿಡಿಯ ಹೆಚ್ಚುವರಿ ಇಒ ಧರ್ಮ ರೆಡ್ಡಿ ಡಾಲರ್ ಶೇಷಾದ್ರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಟಿಟಿಡಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಲೇ ಶೇಷಾದ್ರಿ ಅವರಿಗೆ ಹೃದಯಾಘಾತ ಸಂಭವಿಸಿದೆ.