ಪಣಜಿ: ಭಾರತೀಯ ನೌಕಾಪಡೆಯ 'ಗೋವಾ ಕಡಲ ಸಮಾವೇಶ'ದ ಮೂರನೇ ಆವೃತ್ತಿಯು ಭಾನುವಾರ (ನ.7) ಆರಂಭವಾಗಲಿದ್ದು, 9 ರವರೆಗೆ ನಡೆಯಲಿದೆ.
ಪಣಜಿ: ಭಾರತೀಯ ನೌಕಾಪಡೆಯ 'ಗೋವಾ ಕಡಲ ಸಮಾವೇಶ'ದ ಮೂರನೇ ಆವೃತ್ತಿಯು ಭಾನುವಾರ (ನ.7) ಆರಂಭವಾಗಲಿದ್ದು, 9 ರವರೆಗೆ ನಡೆಯಲಿದೆ.
ಹಿಂದೂ ಮಹಾಸಾಗರ ಪ್ರದೇಶದ ಭದ್ರತೆಗೆ ಎದುರಾಗುವ ಸವಾಲುಗಳು ಮತ್ತು ಇತರ ವಿಷಯಗಳ ಬಗ್ಗೆ ಈ ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ನೌಕಾಪಡೆಯ ವಕ್ತಾರರೊಬ್ಬರು ಹೇಳಿದ್ದಾರೆ.
ಈ ಸಮಾವೇಶವನ್ನು ಗೋವಾದ ನಾವಲ್ ವಾರ್ ಕಾಲೇಜ್‌ನ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಕಡಲ ಸುರಕ್ಷತೆ ಕುರಿತು ಅಧ್ಯಯನ ಕೈಗೊಂಡಿರುವ ವಿವಿಧ ದೇಶಗಳ ತಜ್ಞರನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ ಭಾರತೀಯ ನೌಕಾಪಡೆ ಈ ಸಮಾವೇಶವನ್ನು ಆಯೋಜಿಸಿದೆ ಎಂದೂ ಅವರು ತಿಳಿಸಿದ್ದಾರೆ.
ಬಾಂಗ್ಲಾದೇಶ, ಇಂಡೋನೇಷ್ಯಾ, ಮಡಗಾಸ್ಕರ್, ಮಲೇಷ್ಯಾ, ಮಾಲ್ಡೀವ್ಸ್, ಮಾರಿಷಸ್, ಮ್ಯಾನ್ಮಾರ್, ಸೀಶೆಲ್ಸ್, ಸಿಂಗಾಪುರ, ಶ್ರೀಲಂಕಾ ಮತ್ತು ಥಾಯ್ಲೆಂಡ್‌ನ ನೌಕಾಪಡೆಗಳ ಮುಖ್ಯಸ್ಥರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.