ತಿರುವನಂತಪುರ: ಚಿನ್ನಾಭರಣ ಕಳ್ಳಸಾಗಣೆ ಆರೋಪಿ ಸ್ವಪ್ನಾ ಸುರೇಶ್ ಜೈಲು ಪಾಲಾದ ಬಳಿಕ ಆರೋಗ್ಯ ಹದಗೆಟ್ಟಿದ್ದು, ಚೇತರಿಸಿಕೊಳ್ಳಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. ವೈದ್ಯರ ಸೂಚನೆಯಂತೆ ಸ್ವಪ್ನಾ ನಗರದ ಪ್ರಮುಖ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ. ಜೈಲುವಾಸದಿಂದ ಮಾನಸಿಕ ಹಾಗೂ ದೈಹಿಕವಾಗಿ ತೊಂದರೆ ಅನುಭವಿಸುವಂತಾಗಿದೆ ಎಂದು ಸ್ವಪ್ನಾ ಹೇಳಿಕೊಂಡಿದ್ದಾರೆ.
ಜೈಲಿನಿಂದ ಹೊರಬಂದ ಬಳಿಕ ಸ್ವಪ್ನಾ ಈಗ ಬಲರಾಮಪುರಂನಲ್ಲಿರುವ ತನ್ನ ಮನೆಯಲ್ಲಿಯೇ ಇದ್ದಾಳೆ. ಕೆಲವು ಹತ್ತಿರದ ಸಂಬಂಧಿಗಳು ಸ್ವಪ್ನಾಳ ಭೇಟಿಗೆ ಆಗಮಿಸುತ್ತಿದ್ದಾರೆ.ಈ ಮಧ್ಯೆ ಸ್ವಪ್ನ ತಜ್ಞರ ನಿರ್ದೇಶಾನುಸಾರ ಚಿಕಿತ್ಸೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜೈಲಿನಿಂದ ಬಿಡುಗಡೆಯಾದ ನಂತರ, ಸಪ್ನಾ ಇನ್ನೂ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿಲ್ಲ. ಕೆಲವು ದಿನಗಳ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ಹೇಳುತ್ತೇನೆ ಎಂಬುದು ಸ್ವಪ್ನಾ ಹೇಳಿದ್ದಾಳೆ. ಸ್ವಪ್ನಾಳ ತಾಯಿ ಪ್ರಭಾವತಿ ಕೂಡ ಸ್ವಪ್ನಾಳೊಂದಿಗೆ ಮಾಧ್ಯಮಗಳಲ್ಲಿ ಮಾತಾಡುವುದಾಗಿ ಹೇಳಿದ್ದರು.
ಜೈಲು ಶಿಕ್ಷೆಯಿಂದ ಸ್ವಪ್ನಾಳ ಆರೋಗ್ಯ ಹದಗೆಟ್ಟಿದೆ ಎಂದು ಪ್ರಭಾವತಿ ಈ ಹಿಂದೆ ಹೇಳಿಕೆ ನೀಡಿದ್ದರು. ಜೈಲಿನ ಆಹಾರ ಸ್ವಪ್ನಾಳಿಗೆ ಸೇರುತ್ತಿರಲಿಲ್ಲ. ಹಾಗಾಗಿ ಕಡಿಮೆ ಪ್ರಮಾಣದಲ್ಲಿ ಮಾತ್ರ ತಿನ್ನುತ್ತಿದ್ದಳು. ಇದು ಆಯಾಸ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಯಿತು. ಜಾಮೀನು ಪಡೆಯುವಲ್ಲಿನ ವಿಳಂಬವು ಸ್ವಪ್ನಾಳನ್ನು ತೀವ್ರ ಮಾನಸಿಕ ಒತ್ತಡಕ್ಕೆ ತಳ್ಳಿತು. ನಿದ್ರಾಹೀನತೆ ಸೇರಿದಂತೆ ಇತರ ದ್ಯೆಹಿಕ ಸಮಸ್ಯೆಗಳಿವೆ ಎಂದು ಅವರ ತಾಯಿ ಹೇಳಿದ್ದರು.