ಮುಳ್ಳೇರಿಯ: ಜಿವಿಎಚ್‍ಎಸ್‍ಎಸ್ ಹಸಿರು ನಿಯಮಾವಳಿಗೆ ಅನುಗುಣವಾಗಿ ಮಾಡಿದ ಮಾಲೆಗಳು ಶಾಲಾ ಪ್ರವೇಶೋತ್ಸವಕ್ಕೆ ಗಮನ ಸೆಳೆದವು. ಶಿಕ್ಷಕರ ಸಾಂಘಿಕ ನೇತೃತ್ವದಲ್ಲಿ ತಾಳೆಗರಿಗಳಿಂದ ತಯಾರಿಸಿದ ಸೂರ್ಯಕಾಂತಿ ಹೂಗಳು, ತೆಂಗಿನ ಗರಿಗಳ ಸ್ವಾಗತ ಫಲಕಗಳು ವಿನೂತನವಾಗಿದ್ದವು. ಶಾಲಾ ಪ್ರವೇಶ ಸಮಾರಂಭವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿ ನಡೆಸಲಾಯಿತು. ವಿದ್ಯಾರ್ಥಿಗಳೇ ತಯಾರಿಸಿದ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ವಿತರಿಸಲಾಯಿತು. ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ಶಾಲೆಗಳಲ್ಲಿ ಸಾವಯವ ತರಕಾರಿ ತೋಟಗಳು ಮತ್ತು ಹೂವಿನ ತೋಟಗಳನ್ನು ಸ್ಥಾಪಿಸಲಾಗಿದೆ.
ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ರತ್ನಾಕರ, ಆದೂರು ಸಿಐ ಅನಿಲ್ ಕುಮಾರ್, ತಾ.ಪಂ.ಅಧ್ಯಕ್ಷ ಆನಂದ ಕೆ.ಮವ್ವಾರು ಉಪಸ್ಥಿತರಿದ್ದರು.