ಮುಳ್ಳೇರಿಯ: ಎಡನಾಡು ಸ್ವಸ್ತಿ ಶ್ರೀ ಕಲಾಪ್ರತಿಷ್ಠಾನ ವತಿಯಿಂದ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಹಿರಿಯ ಧಾರ್ಮಿಕ ಮುಂದಾಳು ಸುಬ್ರಾಯ ಬಳ್ಳುಳ್ಳಾಯ ಅವರ ಸಂಸ್ಮರಣೆ ಕಾರ್ಯಕ್ರಮ ಜರುಗಿತು.
ಕಲಾವಿದರಾದ ಶೇಣಿ ವೇಣುಗೋಪಾಲ ಭಟ್ ಮತ್ತು ದಿವಾಣ ಶಿವಶಂಕರ ಭಟ್ ನುಡಿನಮನ ಸಲ್ಲಿಸಿದರು. ದೇವಾಲಯದ ಆನುವಂಶಿಕ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ ಸ್ವಾಗತಿಸಿದರು. ಪತ್ರಕರ್ತ ವೀಜಿ.ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ದಿವಾಣ ಶಿವಶಂಕರ ಭಟ್ ವಂದಿಸಿದರು.
ಕಾರ್ಯಕ್ರಮ ಅಂಗವಾಗಿ ಮಹಾಕವಿ ಮುದ್ದಣ ವಿರಚಿತ"ಶೂರಪದ್ಮಾಸುರ ಕಾಳಗ" ವಿಶೇಷ ತಾಳಮದ್ದಳೆ ಜರುಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸಚಿನ್ ಶೆಟ್ಟಿ ಕುದ್ರೆಪ್ಪಾಡಿ, ರೋಹಿಣಿ ದಿವಾಣ, ಚೆಂಡೆ-ಮದ್ದಳೆಗಳಲ್ಲಿ ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಶ್ರೀ ಸ್ಕಂದ ದಿವಾಣ ಸಹಕರಿಸಿದರು. ಅರ್ಥಗಾರಿಕೆಯಲ್ಲಿ ದಿವಾಣ ಶಿವಶಂಕರ ಭಟ್, ಶೇಣಿ ವೇಣುಗೋಪಾಲ ಭಟ್, ವಿನಯ ಎಸ್.ಚಿಗುರುಪಾದೆ, ಯತೀಶ್ ಕುಮಾರ್ ಕುಲಾಲ್ ಮುಜುಂಗಾವು ಭಾಗವಹಿಸಿದರು.