ಮಲಪ್ಪುರಂ: 12 ವರ್ಷದ ಬಾಲಕಿ ತಲೆಗೆ ಶಾಲು ಹೊದೆದು ಪಿನ್ನು ಚುಚ್ಚಲು ಬಾಯಿಯಲ್ಲಿರಿಸಿದ ಪಿನ್ ಆಕಸ್ಮಿಕವಾಗಿ ನುಂಗಿ ಹೊಟ್ಟೆ ಸೇರಿದ ಪ್ರಕರಣ ನಡೆದಿದೆ. ತಜ್ಞರ ಚಿಕಿತ್ಸೆ ಬಳಿಕ ವೈದ್ಯರು ಪಿನ್ ನ್ನು ಹೊರ ತೆಗೆದಿದ್ದಾರೆ. ತಮಿಳುನಾಡು ಮೂಲದ ಬಾಲಕಿಯ ಹೊಟ್ಟೆಯಿಂದ ಪಿನ್ ತೆಗೆಯಲಾಗಿದೆ.
ಪಿನ್ ನುಂಗಿದ ಬಾಲಕಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು. ಅಲ್ಲಿಂದ ಅವರನ್ನು ತಜ್ಞ ಚಿಕಿತ್ಸೆಗಾಗಿ ಪೆರಿಂತಲ್ಮಣ್ಣ ಕಿಮ್ಸ್ ಅಲ್ಶಿಫಾ ಆಸ್ಪತ್ರೆಗೆ ಸಾಗಿಸಲಾಯಿತು. ಎಕ್ಸ್-ರೇ ಪರೀಕ್ಷೆಯು ಹೊಟ್ಟೆಯಲ್ಲಿ ಹಿಂಭಾಗದಲ್ಲಿ ಪಿನ್ ನಿಂದಾದ ಗಾಯವನ್ನು ಬಹಿರಂಗಪಡಿಸಿತು.
ಎಂಡೋಸ್ಕೋಪಿ ಮೂಲಕ ಪಿನ್ ನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಯಿತು. ಗ್ಯಾಸ್ಟ್ರೋಎಂಟರಾಲಜಿ ಜಿವಿ ವಿಭಾಗದ ಡಾ. ಸಾಜು ಕ್ಸೇವಿಯರ್ ನೇತೃತ್ವದಲ್ಲಿ ಚಿಕಿತ್ಸೆ ನಡೆದಿದೆ.