ಕೊಚ್ಚಿ: ಕೇರಳದ ಜನತೆಯನ್ನು ಬೆಚ್ಚಿಬೀಳಿಸಿದ್ದ ಮಾರಾಡ್ ಹತ್ಯಾಕಾಂಡದ ಇಬ್ಬರು ಆರೋಪಿಗಳಿಗೆ ಮಾರಾಡ್ ವಿಶೇಷ ನ್ಯಾಯಾಲಯ ಅವಳಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಕರಣದ 95ನೇ ಆರೋಪಿ ಕೋಯಾಮೋನ್ ಹಾಗೂ 148ನೇ ಆರೋಪಿ ನಿಜಾಮುದ್ದೀನ್ ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಸ್ಪೋಟಕವಸ್ತು ಕೈವಶವಿರಿಸಿಕೊಂಡಿರುವುದಲ್ಲದೆ, ಕೋಮುವೈಷಮ್ಯ ಪ್ರಚಾರನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೋಯಾಮೋನ್‍ಗೆ ಜೀವಾವಧಿ ಶಿಕ್ಷೆಯೊಂದಿಗೆ 2.2ಲಕ್ಷ ರೂ ದಂಡ ವಿಧಿಸಲಾಗಿದೆ. ಕೊಲೆಕೃತ್ಯ, ಮಾರಕಾಯುಧಗಳೊಂದಿಗೆ ಕಲಹ ಸೃಷ್ಟಿಸುವುದು ಮುಂತಾದ ಕೃತ್ಯಗಳಿಗೆ ಸಂಬಂಧಿಸಿ ನಿಜಾಮುದ್ದೀನ್‍ಗೆ ಶಿಕ್ಷೆ ವಿಧಿಸಲಾಗಿದ್ದು, 56ಸಾವಿರ ರೂ. ದಂಡ ವಿಧಿಸಲಾಗಿದೆ. 2003 ಮೇ 2ರಂದು ಕೋಯಿಕ್ಕೋಡ್ ಸಮಿಹದ ಮಾರಾಡ್ ಕಡಪ್ಪುರದಲ್ಲಿ ನಡೆದ ಹತ್ಯಾಕಾಂಡದಲ್ಲಿ 9ಮಂದಿ ಪ್ರಾಣಕಳೆದುಕೊಂಡಿದ್ದರು. ಘಟನೆ ನಂತರ ತಲೆಮರೆಸಿಕೊಂಡಿದ್ದ ಕೋಯಾಮೋನ್ 2011 ಜ.23ರಂದು ಹಾಗೂ ನಿಜಾಮುದ್ದೀನ್‍ನನ್ನು 2010 ಅ. 15ರಂದು ಬಂಧಿಸಲಾಗಿತ್ತು. 2003 ಮೇ 3ರಂದು ಮಾರಾಡ್‍ನಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಮಧ್ಯೆ ನಡೆದ ಘರ್ಷಣೆಯಲ್ಲಿ ಎಂಟು ಮಂದಿ ಹಿಂದುಗಳು ಪ್ರಾಣಕಳೆದಿಕೊಂಡಿದ್ದರು.