ತಿರುವನಂತಪುರ: ಕೇರಳ ಆರೋಗ್ಯ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಕೆಯಾಗಿರುವ ಪ್ರೊಫೆಟಿಕ್(ಪ್ರವಾದಿ) ಮೆಡಿಸಿನ್ ಪದವಿ ಪ್ರಸ್ತಾವನೆಗಳ ಕುರಿತು ತಕ್ಷಣ ನಿರ್ಧಾರ ಕೈಗೊಳ್ಳುವಂತೆ ಕೋರಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಇಂಟರ್ ನ್ಯಾಷನಲ್ ಇಸ್ಲಾಮಿಕ್ ಯೂನಿವರ್ಸಿಟಿ ಆಫ್ ಪ್ರೊಫೆಷನಲ್ ಮೆಡಿಸಿನ್ ನ ಕುಲಪತಿ ಡಾ. ಕೆ ಅಬ್ದುಲ್ ಅಜೀಜ್ ಹೇಳಿದರು.
ಅರ್ಜಿಯ ಪ್ರಕಾರ, ಯುರೋಪಿಯನ್ ಮತ್ತು ಅರಬ್ ವಿಶ್ವವಿದ್ಯಾನಿಲಯಗಳು ಪೆÇ್ರಫೆಟಿಕ್ ಮೆಡಿಸಿನ್ ಕುರಿತು ಸಂಶೋಧನೆ ನಡೆಸುತ್ತಿವೆ. ಇದು 21 ವರ್ಷಗಳಿಂದ ಕೇರಳದಲ್ಲಿ ಪ್ರವಾದಿ ವೈದ್ಯಕೀಯದ ಶೈಕ್ಷಣಿಕ ಕೆಲಸಕ್ಕೆ ಆಧಾರವಾಗಿದೆ.
ಪ್ರವಾದಿ ಔಷಧವು ರೋಗ, ಚಿಕಿತ್ಸೆ ಮತ್ತು ನೈರ್ಮಲ್ಯದ ಬಗ್ಗೆ ಪ್ರವಾದಿ ಮುಹಮ್ಮದ್ ನೀಡಿದ ಸಲಹೆಯನ್ನು ಸೂಚಿಸುತ್ತದೆ. ಸಚಿವಾಲಯದ ಶಿಫಾರಸಿನ ಮೇರೆಗೆ ಆರೋಗ್ಯ ಭವನಕ್ಕೆ ಸಲ್ಲಿಸಿದ ಪದವಿ ಪ್ರಸ್ತಾವನೆಯನ್ನು 2014ರಲ್ಲಿ ಕೇರಳ ಆರೋಗ್ಯ ವಿಶ್ವವಿದ್ಯಾಲಯಕ್ಕೆ ರವಾನಿಸಲಾಗಿದ್ದು, ಅಂದಿನಿಂದ ನವೀಕರಿಸಿದ ಪದವಿ ಕಾರ್ಯಕ್ರಮಗಳನ್ನು ವಿವಿಧ ಹಂತಗಳಲ್ಲಿ ಸಲ್ಲಿಸಲಾಗಿದೆ. ಆದರೆ ಆರೋಗ್ಯ ವಿಶ್ವವಿದ್ಯಾಲಯವು ಯಾವುದೇ ಉತ್ತರವನ್ನು ನೀಡಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.