ತಿರುವನಂತಪುರ: ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರ ಚಾಲಕ ರವಿವಾರ ಬೆಳಗ್ಗೆ ರಾಜಭವನದ ತನ್ನ ಕ್ವಾರ್ಟರ್ಸ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೊಠಡಿಯಿಂದ ಡೆತ್ ನೋಟು ಪತ್ತೆಯಾಗಿರುವುದರಿಂದ ಇದು ಆತ್ಮಹತ್ಯೆ ಪ್ರಕರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ತೇಜಸ್ ಬರೆದಿರುವ ಡೆತ್ ನೋಟ್ ನಲ್ಲಿ ವೈಯಕ್ತಿಕ ಸಮಸ್ಯೆಗಳು ಅವರ ಸಾವಿಗೆ ಕಾರಣವೆಂದು ಉಲ್ಲೇಖಿಸಲಾಗಿದೆ.
48 ವರ್ಷ ವಯಸ್ಸಿನ ಚೇರ್ತಾಲ ಮೂಲದ ತೇಜಸ್ ಕೆಲ ವರ್ಷಗಳಿಂದ ರಾಜಭವನದಲ್ಲಿ ಕೆಲಸ ಮಾಡುತ್ತಿದ್ದರು.
ತೇಜಸ್ ಶನಿವಾರ ರಾತ್ರಿ ಕರ್ತವ್ಯದಲ್ಲಿದ್ದರು ಹಾಗೂ ಅವರು ವಿಮಾನ ನಿಲ್ದಾಣಕ್ಕೆ ವಾಹನ ಚಲಾಯಿಸಿದ್ದರು ಹಾಗೂ ರಾತ್ರಿ 9 ಗಂಟೆಯ ಹೊತ್ತಿಗೆ ಮರಳಿದ್ದರು.