ನವದೆಹಲಿ: ಡೇಟಾ ಅಂಗೀಕಾರ ಮಸೂದೆಗೆ ಶೀಘ್ರವೇ ಅಂಗೀಕಾರ ನೀಡುವ ಅಗತ್ಯವಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಕೇರಳ ಪೊಲೀಸರು ಆಯೋಜಿಸಿದ್ದ c0c0n ನ 14 ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿರುವ ರಾವತ್, ನಮ್ಮ ಡಿಜಿಟಲ್ ಆಸ್ತಿಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ವಿವಿಧ ರಾಜ್ಯ ಸರ್ಕಾರಗಳ ಸೈಬರ್ ಭದ್ರತಾ ತಜ್ಞರ ಪ್ರಯತ್ನಗಳನ್ನು ಸಂಯೋಜಿಸಬೇಕು ಎಂದು ಹೇಳಿದ್ದಾರೆ.
2019 ರಲ್ಲಿ ಸಂಸತ್‌ನಲ್ಲಿ ಡೇಟಾ ಸುರಕ್ಷತೆ ಮಸೂದೆ ಮಂಡನೆಯಾಗಿತ್ತು. ಇತ್ತೀಚಿನ ವರ್ಚ್ಯುಯಲ್ ಜಗತ್ತಿನಲ್ಲಿ ಡೇಟಾ ಕಳ್ಳತನ ಸಾಮಾನ್ಯವಾಗಿದ್ದು, ಡೇಟಾ ಸುರಕ್ಷತೆ ಮಸೂದೆ ತ್ವರಿತವಾಗಿ ಅಂಗೀಕಾರವಾಗಬೇಕಿದೆ ಎಂದು ಹೇಳಿದ್ದಾರೆ.
ಇನ್ನು ಡೇಟಾ ರಕ್ಷಣೆ ಮತ್ತೊಂದು ಮಹತ್ವದ ವಿಷಯವಾಗಿದ್ದು, ಬಹುತೇಕ ರಾಷ್ಟ್ರಗಳು ಡೇಟಾ ರಕ್ಷಣೆ ಕನೂನುಗಳನ್ನು ಹೊಂದಿವೆ. ಅಂತೆಯೇ 2019 ರಲ್ಲಿ ಸಂಸತ್ ನಲ್ಲಿ ಮಂಡನೆಯಾಗಿದ್ದ ಡೇಟಾ ಸುರಕ್ಷತೆ ಮಸೂದೆಯನ್ನು ತ್ವರಿತವಾಗಿ ಅಂಗೀಕರಿಸಬೇಕಿದೆ ಎಂದು ಹೇಳಿದ್ದಾರೆ.
ಭಾರತಕ್ಕೆ ನಿರ್ದಿಷ್ಟವಾದ ಸೈಬರ್ ಭದ್ರತೆ ಕಾನೂನು ಇಲ್ಲ. ರಾಷ್ಟ್ರೀಯ ಮಟ್ಟದಲ್ಲಿ ವರ್ಚ್ಯುಯಲ್ ಸ್ಪೇಸ್ ನ್ನು ನಿರ್ವಹಣೆ ಮಾಡುವುದಕ್ಕಾಗಿ ಚೌಕಟ್ಟಿನ ಅಗತ್ಯವಿದೆ ಎಂದು ಬಿಪಿನ್ ರಾವತ್ ಹೇಳಿದ್ದಾರೆ. ಸರ್ಕಾರದ ಹಲವು ಏಜೆನ್ಸಿಗಳು ಸೈಬರ್ ಭದ್ರತೆಯೊಂದಿಗೆ ವ್ಯವಹರಿಸುತ್ತಿವೆ. ನಮ್ಮ ರಕ್ಷಣಾ ಸೇವೆಗಳಲ್ಲೂ ಸೈಬರ್ ತಜ್ಞರಿದ್ದಾರೆ ರಾಜ್ಯ ಪೊಲೀಸ್ ವಿಭಾಗದಲ್ಲಿ ಸೈಬರ್ ಸೆಲ್ ಗಳಿವೆ. ತಮ್ಮ ವರ್ಚ್ಯುಯಲ್ ಭಾಷಣದಲ್ಲಿ ರಾವತ್ ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗಿರುವ ಡಿಜಿಟಲ್ ಪೇಮೆಂತ್ ಗಳ ಬಗ್ಗೆಯೂ ಉಲ್ಲೇಖಿಸಿದ್ದು, ಇದರಿಂದಲೂ ಸಂಕೀರ್ಣವಾದ ಸೈಬರ್ ಕ್ರೈಮ್ ಗಳ ಹೆಚ್ಚಳವಾಗಿದೆ. ಐಟಿ ಕಾಯ್ದೆ 2000 ನ್ನು 2008 ರಲ್ಲಿ ತಿದ್ದುಪಡಿಯಾಗಿದ್ದ ಕಾಯ್ದೆಯನ್ನು ಮತ್ತೆ ಅಪ್ಡೇಟ್ ಮಾಡಬೇಕಾದ ಅಗತ್ಯವಿದೆ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ. ಎಲ್‌ಎಸಿಯಲ್ಲಿ ಚೀನಾ ಗ್ರಾಮ ನಿರ್ಮಾಣದ ಕುರಿತು ಬಿಪಿನ್ ರಾವತ್ ಹೇಳಿದ್ದೇನು?: ಎಲ್‌ಎಸಿಯಲ್ಲಿ ಚೀನಾವು ಗ್ರಾಮ ನಿರ್ಮಾಣ ಮಾಡುತ್ತಿರುವ ಕುರಿತು ರಕ್ಷಣಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ಪ್ರತಿಕ್ರಿಯೆ ನೀಡಿದ್ದಾರೆ. ''ಭಾರತಕ್ಕೆ ಸೇರಿದ ಪ್ರದೇಶದ ಎಲ್ಎಸಿಯಲ್ಲಿ ಚೀನಾ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ ಎಂಬುದು ಸತ್ಯವಲ್ಲ, ಆ ಗ್ರಾಮಗಳು ಚೀನಾಗೆ ಸೇರುವ ಎಲ್ಎಸಿಯಲ್ಲೇ ಇವೆ ಎಂದು ಹೇಳಿದ್ದಾರೆ. ಭಾರತದ ಎಲ್ಎಸಿಯೊಳಗೆ ಚೀನಾ ಅತಿಕ್ರಮಣ ಪ್ರವೇಶ ಮಾಡಿಲ್ಲ'' ಎಂದೂ ಬಿಪಿನ್ ರಾವತ್ ಹೇಳಿದ್ದಾರೆ. ಅಮೆರಿಕದ ವರದಿಗೆ ಸಂಬಂಧಿಸಿದಂತೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದ ಭಾರತದ ವಿದೇಶಾಂಗ ಸಚಿವಾಲಯ, ಚೀನಾದ ಅಕ್ರಮ ಪ್ರವೇಶವನ್ನು ಹಾಗೂ ಚೀನಾದ ಅಸಮರ್ಥನೀಯ ಪ್ರತಿಪಾದನೆಗಳನ್ನು ಭಾರತ ಒಪ್ಪುವುದಿಲ್ಲ ಎಂದು ಹೇಳಿದ್ದರು. ಅಮೆರಿಕದ ರಕ್ಷಣಾ ಇಲಾಖೆ ತನ್ನ ಇತ್ತೀಚಿನ ವರದಿಯಲ್ಲಿ ಚೀನಾ ಟಿಬೆಟ್ ಅಟಾನಾಮಸ್ ಪ್ರದೇಶ ಹಾಗೂ ಭಾರತದ ಅರುಣಾಚಲ ಪ್ರದೇಶದ ಈಶಾನ್ಯ ಸೆಕ್ಟರ್ ಎಲ್ಎಸಿಯ ಮಧ್ಯಭಾಗದಲ್ಲಿರುವ ವಿವಾದಿತ ಪ್ರದೇಶದ ಒಳಭಾಗದಲ್ಲಿ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ಹೇಳಿತ್ತು. ಚೀನಾ ಭೂಗಡಿಯಲ್ಲಿ ಯಾವುದೇ ರೀತಿಯಲ್ಲಿ ಉಲ್ಲಂಘನೆ ಕಂಡುಬಂದರೆ ಹಾಗೂ ತನ್ನ ದೇಶದ ಅಖಂಡತೆಗೆ ಧಕ್ಕೆ ಒದಗಿಬಂಡರೆ ತನ್ನ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲು ಈ ಕಾನೂನು ಚೀನಾಗೆ ಅನುವು ಮಾಡಿಕೊಡಲಿದೆ.
ಈ ನೂತನ ಕಾನೂನಿನಲ್ಲಿ ಗಡಿ ಬಲವರ್ಧನೆ ಮಾತ್ರವಲ್ಲದೆ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಗಡಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ನಿರ್ಮಾಣ ಹಾಗೂ ಅಲ್ಲಿನ ಜನರ ಜೀವನ ಸದೃಢಗೊಳಿಸುವ ಕಾರ್ಯಕ್ರಮಗಳ ಕುರಿತಾಗಿ ಉಲ್ಲೇಖವಿದೆ.