ತಿರುವನಂತಪುರ: ರಾಜ್ಯದಲ್ಲಿ ಹೆಚ್ಚುತ್ತಿರುವ ನಕಲಿ ಡೀಸೆಲ್ ಬಳಕೆಗೆ ಕಡಿವಾಣ ಹಾಕಲು ತಪಾಸಣೆಯನ್ನು ಬಿಗಿಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ. ಇದೇ ವೇಳೆ ಸಾರಿಗೆ ಆಯುಕ್ತರು ಮಾತನಾಡಿ, ನಕಲಿ ಡೀಸೆಲ್ ಬಳಕೆಯಾಗುತ್ತಿರುವ ಪ್ರದೇಶಗಳ ಮೇಲೆ ಮೋಟಾರು ವಾಹನ ಇಲಾಖೆ ನಿಗಾ ವಹಿಸುತ್ತಿದೆ ಎಂದಿರುವರು.
ಕೈಗಾರಿಕಾ ಉದ್ದೇಶಕ್ಕೆ ಮಾತ್ರ ಬಳಸಬೇಕಾದ ವಿಶೇಷ ರೀತಿಯ ಡೀಸೆಲ್ ನ್ನು ವಾಹನಗಳಲ್ಲಿ ಬಳಸಿದರೆ ಬೆಂಕಿ ಮತ್ತು ವಾಯು ಮಾಲಿನ್ಯದ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು. ಇಂಧನ ಬೆಲೆಯಲ್ಲಿ ಸಿಗುವ ಅಲ್ಪ ಲಾಭದ ಹಿನ್ನೆಲೆಯಲ್ಲಿ ವಾಹನ ಮಾಲೀಕರ ಈ ಕ್ರಮದಿಂದ ಪ್ರಯಾಣಿಕರ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಚಿವರು ಹೇಳಿದರು.
ನಕಲಿ ಇಂಧನ ಬಳಸುವ ಖಾಸಗಿ ವಾಹನಗಳ ಮೇಲೆ ನಿಗಾ ವಹಿಸಿ ಅವುಗಳ ನೋಂದಣಿ ಮತ್ತು ಪರ್ಮಿಟ್ ರದ್ದುಪಡಿಸಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರಿಗೆ ಆಯುಕ್ತರಿಗೆ ಸಚಿವರು ಸೂಚಿಸಿದ್ದಾರೆ.