ಅಲಿಬೌಗ್: ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಕರ್ಜಾತ್ ಪುರಸಭೆಯನ್ನು ಕಸ ಮುಕ್ತ ಪಟ್ಟಣವೆಂದು ಕೇಂದ್ರ ಸರ್ಕಾರ ಘೊಷಿಸಿದೆ.
ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಪಟ್ಟಣಗಳಲ್ಲಿ ತ್ಯಾಜ್ಯ ವಿಲೇವಾರಿ ನಿರ್ವಹಣೆಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರ ನಿಯೋಜಿಸಿದ್ದ ಏಜೆನ್ಸಿಯು ಕರ್ಜಾತ್ ಪುರಸಭೆಗೆ 3 ಸ್ಟಾರ್ ರೇಟಿಂಗ್ ನೀಡಿದೆ ಎಂದು ಅಭಿಯಾನದ ಮುಖ್ಯ ಅಧಿಕಾರಿ ಡಾ.
ಕರ್ಜಾತ್‌ನಲ್ಲಿ, ಪ್ರತಿ ಮನೆಯಿಂದಲೂ ಹಸಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಬಯೋಗ್ಯಾಸ್ (ನೈಸರ್ಗಿಕ ಅನಿಲ) ಮತ್ತು ಕಾಂಪೋಸ್ಟ್ ಗೊಬ್ಬರ ತಯಾರಿಸಲಾಗುತ್ತದೆ. ವಿದ್ಯುತ್ ಅನ್ನು ಬೀದಿ ದೀಪಗಳಿಗೆ ಬಳಸಲಾಗುತ್ತದೆ. ಹಾಗೆಯೇ, ಪಾದಚಾರಿ ಮಾರ್ಗಗಳಲ್ಲಿ ಅಥವಾ ಪಾರ್ಕಿಂಗ್ ಪ್ರದೇಶದಲ್ಲಿ ಹಾಕುವ ಪೇವರ್ ಬ್ಲಾಕ್ ತಯಾರಿಕೆಗೆ ಒಣ ಕಸವನ್ನು ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಾದ ತರಕಾರಿ ಮಾರುಕಟ್ಟೆ, ಮೀನು ಮಾರುಕಟ್ಟೆಯನ್ನು ಸ್ವಚ್ಛಗೊಳಿಸಲಾಗಿದೆಯೇ ಎಂಬುದನ್ನು ಪುರಸಭೆ ಅಧಿಕಾರಿಗಳು ದಿನಕ್ಕೆರಡು ಬಾರಿ ಖಚಿತಪಡಿಸಿಕೊಳ್ಳುತ್ತಾರೆ ಎಂದೂ ಮಾಹಿತಿ ನೀಡಿದ್ದಾರೆ.