HEALTH TIPS

ಕೋವಿಡ್‌ ಲಸಿಕೆ: ದೆಹಲಿಯಲ್ಲಿ 'ಹರ್‌ ಘರ್‌ ದಸ್ತಕ್‌' ಅಭಿಯಾನ ಶುರು

                ನವದೆಹಲಿ: ಇನ್ನೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳದ ಮತ್ತು ಎರಡನೇ ಡೋಸ್‌ ತೆಗೆದುಕೊಳ್ಳಬೇಕಾದ ಅವಧಿ ಮೀರಿರುವ ಜನರಿಗೆ ಮನೆ ಮನೆಗೆ ಹುಡುಕಿಕೊಂಡು ಹೋಗಿ ಲಸಿಕೆ ಹಾಕುವ 'ಹರ್‌ ಘರ್‌ ದಸ್ತಕ್‌' ಅಭಿಯಾನಕ್ಕೆ ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಚಾಲನೆ ದೊರೆತಿದೆ.

                ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾರೊಬ್ಬರೂ ಹೊರಗುಳಿಯದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಇತ್ತೀಚೆಗೆ ಒಂದು ತಿಂಗಳ ಅವಧಿಯ 'ಹರ್ ಘರ್ ದಸ್ತಕ್' ಅಭಿಯಾನ ಪ್ರಾರಂಭಿಸಿದೆ.

ದೆಹಲಿ ಸರ್ಕಾರ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ನವೆಂಬರ್ 12ರಿಂದ 27ರವರೆಗೆ ಈ ಅಭಿಯಾನ ನಡೆಯಲಿದೆ. ಮೊದಲ ಅಥವಾ ಎರಡನೇ ಡೋಸ್‌ ಲಸಿಕೆ ಪಡೆಯುವವರಿಗೆ 'ವಾಕ್-ಇನ್ ವ್ಯಾಕ್ಸಿನೇಷನ್' ಸೌಲಭ್ಯವು ಎಲ್ಲಾ ಕೇಂದ್ರಗಳಲ್ಲಿ ಲಭ್ಯವಿರಲಿದೆ. ಇದಕ್ಕಾಗಿ ಯಾವುದೇ ಪೂರ್ವ ನೋಂದಣಿಯ ಅಗತ್ಯವಿಲ್ಲ.

               ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಈವರೆಗೆ ಎರಡು ಕೋಟಿಗೂ ಹೆಚ್ಚು ಡೋಸ್‌ ಲಸಿಕೆ ನೀಡಲಾಗಿದೆ. ಇದರಲ್ಲಿ 77 ಲಕ್ಷಕ್ಕೂ ಹೆಚ್ಚು ಜನರು ಎರಡು ಡೋಸ್‌ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ.

           ಹೆಚ್ಚಿನ ಸಂಖ್ಯೆಯ ಜನರು ಈಗಾಗಲೇ ಕೋವಿಡ್‌ ಸೋಂಕಿಗೆ ಒಳಗಾಗಿರುವುದರಿಂದ ಮತ್ತು ಲಸಿಕೆ ವೇಗದಲ್ಲಿ ಸ್ಥಿರತೆ ಇರುವುದರಿಂದ ದೆಹಲಿಯಲ್ಲಿ ಸುಮಾರು ಮೂರೂವರೆ ತಿಂಗಳಿನಿಂದ ದೈನಂದಿನ ಪ್ರಕರಣಗಳು 100ರ ಗಡಿ ದಾಟಿಲ್ಲ ಎಂದು ತಜ್ಞರು ಹೇಳಿದ್ದಾರೆ.

             ಎರಡು ಡೋಸ್‌ಗಳ ನಡುವಿನ ನಿಗದಿತ ಮಧ್ಯಂತರದ ಅವಧಿ ಮುಗಿದ ನಂತರ ಲಸಿಕೆ ಪಡೆದಿರದ ಫಲಾನುಭವಿಗಳಿಗೆ ಎರಡನೇ ಡೋಸ್ ಅನ್ನು ಆದ್ಯತೆ ಮೇಲೆ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಇತ್ತೀಚೆಗೆ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries