ಕಾಸರಗೋಡು: ಮಾಯಿಪ್ಪಾಡಿ ಡಯಟ್ ಲಾಬ್ ಸ್ಕೂಲ್ ಪ್ರೈಮರಿ ವಿಭಾಗದಲ್ಲಿ ಎಲ್.ಪಿ.ಎಸ್.ಟಿ. ಕನ್ನಡ, ಜ್ಯೂನಿಯರ್ ಲಾಂಗ್ವೇಜ್ ಅರೆಬಿಕ್(ಪೂರ್ಣಾವಧಿ) ಹುದ್ದೆಗಳು ತೆರವಾಗಿದ್ದು, ಈ ಸಂಬಂಧ ಸಂದರ್ಶನ ನ.5ರಂದು ಬೆಳಗ್ಗೆ 11 ಗಂಟೆಗೆ ಡಯಟ್ ಕಚೇರಿಯಲ್ಲಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.
ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನ.8ರಂದು ಶಿಕ್ಷಕ ಹುದ್ದೆಗೆ ಸಂದರ್ಶನ
ಪೆರ್ಲ:ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಜೂ.ಹಿಂದಿ, ಎಕೊನೊಮಿಕ್ಸ್, ಸೋಶಿಯೋಲಜಿ, ಹಿಸ್ಟರಿ ತಾತ್ಕಾಲಿಕ ಶಿಕ್ಷಕ ಹುದ್ದೆಗೆ ನ.8ರಂದು ಬೆಳಗ್ಗೆ 11ಕ್ಕೆ ಸಂದರ್ಶನ ನಡೆಯಲಿದೆ.ಆಸಕ್ತ ಅರ್ಹ ಅಭ್ಯರ್ಥಿಗಳು ಅಸಲಿ ದಾಖಲೆಯೊಂದಿಗೆ ಶಾಲಾ ಕಚೇರಿಯಲ್ಲಿ ಹಾಜರಿರುವಂತೆ ಪ್ರಾಂಶುಪಾಲರು ತಿಳಿಸಿದ್ದಾರೆ.